Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುದ್ಧದ ಭೀತಿ ನಡುವೆ ಆಕಾಶದಲ್ಲಿ ಕಾಗೆಗಳ ಗುಂಪು ಹಾರಟ: ಎಲ್ಲೆಡೆ ಆತಂಕ, ತಜ್ಞರಿಂದ ವೈಜ್ಞಾನಿಕ ಸ್ಪಷ್ಟನೆ

---Advertisement---

ಟೆಲ್ ಅವಿವ್ : ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್–ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ಇಸ್ರೇಲ್‌ನ ಟೆಲ್ ಅವಿವ್ ನಗರ ಆಕಾಶದಲ್ಲಿ ಸಾವಿರಾರು ಕಾಗೆಗಳು ಗುಂಪಾಗಿ ಸುತ್ತುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕಕ್ಕೆ ಕಾರಣವಾಗಿದೆ.ಈ ವಿಡಿಯೋದಲ್ಲಿ ನೂರಾರು ಕಾಗೆಗಳು ಆಕಾಶದಲ್ಲಿ ವಲಯ ರೂಪದಲ್ಲಿ ಹಾರುತ್ತಿರುವುದು ಕಾಣಿಸಿಕೊಂಡಿದ್ದು, X ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವೇಗವಾಗಿ ಹರಡುತ್ತಿದೆ.

ಯುದ್ಧ ಭೀತಿಯ ನಡುವೆ ಈ ದೃಶ್ಯ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಇದನ್ನು ಕೆಲವರು ಅಪಶಕುನದ ಸಂಕೇತವೆಂದು ವ್ಯಾಖ್ಯಾನಿಸುತ್ತಿದ್ದಾರೆ.
ಕೆಲವರು ಈ ಘಟನೆಯನ್ನು ಧಾರ್ಮಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದ ನೋಡಿ “ವಿನಾಶದ ಮುನ್ನೋಟ” ಎಂದು ಹೇಳುತ್ತಿದ್ದರೆ, ಮತ್ತೊಬ್ಬರು ಇದನ್ನು ಮುಂದಿನ ಅಪಾಯಗಳ ಸೂಚನೆ ಎಂದು ಕೊಂಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದಾಡುತ್ತಿವೆ.ಆದರೆ ತಜ್ಞರು ಈ ಕುರಿತು ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣವಾಗಿ ನೈಸರ್ಗಿಕ ಘಟನೆಯಾಗಿರಬಹುದು ಎಂದು ಹೇಳಿದ್ದಾರೆ. ಕಾಗೆಗಳು ಸಾಮಾನ್ಯವಾಗಿ ಆಹಾರ ಹುಡುಕಲು, ಹವಾಮಾನ ಬದಲಾವಣೆಯಿಂದ ರಕ್ಷಿಸಿಕೊಳ್ಳಲು ಅಥವಾ ಗುಂಪು ರಕ್ಷಣೆಯ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಸೇರುವುದೇ ಸಾಮಾನ್ಯ.

ವಲಸೆ, ಪರಿಸರ ಹಾಗೂ ಆಹಾರ ಲಭ್ಯತೆ ಇಂತಹ ಕಾರಣಗಳಿಂದ ಈ ರೀತಿಯ ಗುಂಪು ಹಾರಾಟ ಸಂಭವಿಸುತ್ತದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ, ಈ ವಿಡಿಯೋ ನಿಜವಾಗಿಯೂ ಟೆಲ್ ಅವಿವ್‌ನಲ್ಲೇ ಚಿತ್ರೀಕರಿಸಲ್ಪಟ್ಟಿದೆಯೇ ಎಂಬುದರ ಬಗ್ಗೆ ಅಧಿಕೃತ ದೃಢೀಕರಣ ಇಲ್ಲ. ಆದರೂ, ವೈರಲ್ ದೃಶ್ಯವು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಯುದ್ಧದ ಆತಂಕದ ನಡುವೆಯೇ ಜನರಲ್ಲಿ ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...