ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಮೇಕೆದಾಟು ಯೋಜನೆಯಿಂದಾಗಿ ಬೆಂಗಳೂರಿನ ಜನಕ್ಕೆ ಕುಡಿಯುವ ನೀರು ಸಿಗಲಿದೆ. ಹೀಗಾಗಿ ಕಾವೇರಿ ನದಿಗೆ ಮೇಕೆದಾಟು ಬಳಿ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈಗಾಗಲೇ ಇದರ ಕಾರ್ಯ ತನ್ನ ವೇಗವನ್ನು ಆರಂಭಿಸಿದೆ. ಈಗಾಗಲೇ ಸರ್ವೇ ಆರಂಭವಾಗಿದೆ. ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಮರಗಳ ಏಣಿಕೆ ಕಾರ್ಯ ಆರಂಭವಾಗಿದೆ. 39 ಉಪವಯಲ ಅರಣ್ಯಾಧಿಕಾರಿಗಳನ್ನು ಸರ್ವೆ ಮಾಡುವುದಕ್ಕೆ ಸರ್ಕಾರ ನಿಗಧಿ ಮಾಡಿದೆ. ಇದರ ನಡುವೆ ತಮಿಳುನಾಡು ಮತ್ತೆ ತನ್ನ ವರಸೆ ಮುಂದುವರೆಸಿದ್ದು, ಈ ಯೋಜನೆ ಸುಪ್ರೀಂ ಹಾಗೂ ಕಾವೇರಿ ನ್ಯಾಯಾಧೀಕರಣದ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಎಂದಿದೆ.
ಮೇಕೆದಾಟು ಯೋಜನೆಯಿಂದ ಬೆಂಗಳೂರಿನ ಕುಡಿಯುವ ನೀರಿನ ಕೊರತೆ ನೀಗುತ್ತದೆ. ಜೊತೆಗೆ ಜಲ ವಿದ್ಯುತ್ ಉತ್ಪಾದನೆ ಹಾಗೂ ತಮಿಳುನಾಡಿನ ನೀರಿನ ಅಗತ್ಯವನ್ನು ಪೂರೈಸಲು ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ನೆರವಾಗಲಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪಾದಯಾತ್ರೆ ನಡೆದಿತ್ತು. ಸದ್ಯ ಅವರದ್ದೇ ಸರ್ಕಾರ ಇರುವ ಹಿನ್ನೆಲೆ ಮೇಕೆದಾಟು ಯೋಜನೆಯ ಕಾರ್ಯ ಶುರುವಾಗಿದೆ.