ವಾಷಿಂಗ್ಟನ್: ಸಿಎನ್ಎನ್ ವಾಹಿನಿಯು ಸಾಕಷ್ಟು ಫ್ಲ್ಯಾನ್ ಮಾಡಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಂದರ್ಶನವನ್ನು ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಆಂಕರ್ ಹಿಜಾಬ್ ಧರಿಸಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಇರಾನ್ ಅಧ್ಯಕ್ಷ ಈ ಸಂದರ್ಶನವನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ಸಂಬಂಧ ನಿರೂಪಕಿ ಕ್ರಿಸ್ಟಿಯಾನೇ ಅಮನ್ ಪೋರ್ ಟ್ವಿಟ್ಟರ್ ನಲ್ಲಿ ನಡೆದ ಘಟನೆ ವಿವರಿಸಿದ್ದಾರೆ.
ಇರಾನ್ ಅಧ್ಯಕ್ಷ ಒಂದು ಕಡೆ ಕುಳಿತಿರುವ ಇನ್ನೊಂದು ಕಡೆ ಖಾಲಿ ಖುರ್ಚಿ ಇರುವಂತ ಫೋಟೋ ಹಂಚಿಕೊಂಡಿರುವ ನಿರೂಪಕಿ, ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಚರ್ಚಿಸಲು ಯೋಚಿಸಿದ್ದೆ. ಇದರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಮಹಿಳೆ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು. ಹಿಜಾಬ್ ಸುಟ್ಟು ಪ್ರತಿಭಟನೆ ನಡೆಸುತ್ತಿರುವುದು ಸೇರಿದಂತೆ ಹಲವಾರು ಘಟನೆಗಳ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಿದ್ದೆ.
ಅವರ ಸಂದರ್ಶನ ವಾರದ ಹಿಂದೆಯೇ ಫ್ಲ್ಯಾನ್ ಆಗಿತ್ತು. ಅದರ ಜೊತೆಗೆ ಅಂದು 8 ಗಂಟೆಗಳಿಂದ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದೆವು. ಅವರಿಗಾಗಿ 40 ನಿಮಿಗಳ ಕಾಲ ಕಾಯುತ್ತಿದ್ದೆವು. ಆದರೆ ಸಂದರ್ಶನಕ್ಕೂ ಮುನ್ನ ಅವರ ಸಹಾಯಕರೊಬ್ಬರು ಬಂದು, ಇದು ಮೋಹರಂ ಪವಿತ್ರ ತಿಂಗಳು. ಹೀಗಾಗಿ ಹಿಜಾಬ್ ಧರಿಸಿ ಎಂದು ಹೇಳಿದ್ದರು. ನಾನು ಅದನ್ನು ನಯವಾಗಿಯೇ ತಿರಸ್ಕಾರ ಮಾಡಿದೆ.
And so we walked away. The interview didn’t happen. As protests continue in Iran and people are being killed, it would have been an important moment to speak with President Raisi. 7/7 pic.twitter.com/kMFyQY99Zh
— Christiane Amanpour (@amanpour) September 22, 2022
ಈ ಹಿಂದೆ ಕೂಡ ಹಲವರ ಸಂದರ್ಶನ ಮಾಡಿದ್ದೇನೆ. ಆದರೆ ಯಾರು ಹಿಜಾಬ್ ಧರಿಸಿ ಎಂದು ಹೇಳಿಲ್ಲ. ಹಾಗೇ ನಾವೂ ನ್ಯೂಯಾರ್ಕ್ ನಲ್ಲಿದ್ದೇವೆ. ಇಲ್ಲಿ ಹಿಜಾಬ್ ಸಂಬಂಧಿಸಿದ ಕಾನೂನುಗಳಿಲ್ಲ ಎಂದೆ. ಆದರೆ ಅವರು ಸಂದರ್ಶನವನ್ನು ಕ್ಯಾನ್ಸಲ್ ಮಾಡಿದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಇರಾನ್ ನಲ್ಲಿ ಹಿಜಾಬ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿಯೇ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಪ್ರತಿಭಟನೆ ನಡೆಯುತ್ತಿದೆ.