ಚಳ್ಳಕೆರೆ, (ಏ.22) : ಸಂವಿಧಾನದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸವಲತ್ತುಗಳನ್ನು ಪಡೆದಂತ ವ್ಯಕ್ತಿಗಳು ದುರ್ಬಲರ ಮತ್ತು ಸಮಾಜದ ಪರ ನಿಲ್ಲಲಿಲ್ಲ ವೆಂಬ ನೋವು ಅಂಬೇಡ್ಕರ್ ಅವರನ್ನು ಬಹಳ ದಿನಗಳ ಕಾಲ ಕಾಡಿಸಿತ್ತು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಜಯಂತಿಯ ಆಶಯ ಭಾಷಣ ಮಾಡಿ, ಮಾತನಾಡಿದರು.
ಅಂಬೇಡ್ಕರ್ ಅವರಿಗೆ ಮೂರು ಸನ್ನಿವೇಶಗಳು ಅವರ ಕೊನೆಯ ಉಸಿರಿರುವರೆಗೂ ಅವರ ಸ್ಕೃತಿ ಪಟಲದಿಂದ ದೂರವಾಗಿರಲಿಲ್ಲ. ಮೊದಲನೇ ಯಾವುದು ಪೂನಾ ಒಪ್ಪಂದ ಎರಡನೆಯದು ಹಿಂದೂ ಕೋಡ್ ಬಿಲ್ ಮೂರನೆಯದು ಅವರ ಅಂತ್ಯದ ಕಾಲ ಇವುಗಳು ಅವರನ್ನು ತುಂಬಾ ಬಾಧಿಸಿದ ಕ್ಷಣಗಳು.
ಇದನ್ನರಿತ ಈಗಿನ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ರಾಜ್ಯಾಂಗದ ಮುಖಾಂತರ ಸ್ವೀಕರಿಸಿದ ನಾವು ಜಾತಿ ವರ್ಗ ಮತ್ತು ಅಂತಸ್ತು ರಹಿತ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ತಮ್ಮ ಉಳಿತಾಯದ ಒಂದಷ್ಟು ಭಾಗವನ್ನು ಸಮಾಜದ ಇಂಥ ಜನರಿಗೆ ಮೀಸಲಿಟ್ಟು ಇವರ ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿಕರಣಕ್ಕೆ ಶ್ರಮಿಸಿ ಪರಿವರ್ತನೆಗೆ ನಾಂದಿ ಹಾಡಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಿದ್ದಯ್ಯನ ದುರ್ಗದ ಸಿದ್ಧಲಿಂಗ ಮಹಾಸ್ವಾಮಿಗಳು ಅಂಬೇಡ್ಕರ್ ಅವರ ಆಶಯಗಳು ಇಂದಿಗೂ ಪ್ರಸ್ತುತ ವಾಗಿದ್ದು ಸಮಾಜದ ಪ್ರತಿ ವರ್ಗದವರು ದುಸ್ಥಿತಿಯಲ್ಲಿರುವ ಅಂತಹ ಜನಗಳ ಸಮಾಜಿಕ ಬದಲಾವಣೆಗೆ ಕಂಕಣ ಬದಲಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೊಣಕಾಲ್ಮುರು ವೃತ್ತ ನಿರೀಕ್ಷಕ ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧ್ಯಕ್ಷರು,ಉಪಾಧ್ಯಕ್ಷರು, ಮತ್ತು ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.