ಸೆಪ್ಟೆಂಬರ್ 04 ರಂದು ಚಿತ್ರದುರ್ಗದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‍ನಿಂದ ಅಂಬೇಡ್ಕರ್ ಉತ್ಸವ ಚಿತ್ರದುರ್ಗ – 2

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಸೆ.01) :
ಪರಿಶಿಷ್ಟ ಜಾತಿಯಲ್ಲಿನ ಮೀಸಲಾತಿ ವರ್ಗಿಕರಣ, ಕೋಮು ಸಂಘರ್ಷದ ರಾಜಕಾರಣದಿಂದಾಗಿ ರಾಜ್ಯದ 101 ಪರಿಶಿಷ್ಟ ಜಾತಿ ಹಾಗೂ 54 ಪರಿಶಿಷ್ಟ ವರ್ಗದ ಜಾತಿಗಳು ತಮ್ಮೊಳಗೆ ಭ್ರಾತೃತ್ವ ಮರೆತು, ಪರಸ್ಪರ ವೈರಿಗಳಂತೆ ಕಾದಾಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಆಶಯದಂತೆ ಪರಿಶಿಷ್ಟ ಜಾತಿ/ವರ್ಗ ಹಾಗೂ ಎಲ್ಲಾ ಜಾತಿಗಳಲ್ಲಿ ಐಕ್ಯತೆ ತರುವ ಉದ್ದೇಶದಿಂದ “ಅಂಬೇಡ್ಕರ್ ಉತ್ಸವ ಚಿತ್ರದುರ್ಗ-2” ಕಾರ್ಯಕ್ರಮವನ್ನು ಸೆ.4ರ ಸೋಮವಾರ ಚಿತ್ರದುರ್ಗದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‍ನಿಂದ ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಸಮಾಜದ ಸಾಮರಸ್ಯ ವಿದ್ಯಾರ್ಥಿಗಳಿಂದಲೇ ಸಾಧ್ಯವೆಂಬುದು ಅರಿತು ಈ ಕಾರ್ಯಕ್ರಮ ಆಯೋಜಿಸಿದೆ.
ಅಲ್ಲದೇ  ರಾಜ್ಯದ ಪರಿಶಿಷ್ಠ ಜಾತಿ ಹಾಗೂ ಪಂಗಂಡದ ಪ್ರತಿಯೊಂದ ಮನೆಯಲ್ಲಿನ ಪ್ರತಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಕಂಟಕವಾಗಿರುವ ಕಾಯಿದೆಗಳ ಬಗ್ಗೆ ಸರಕಾರದ ಗಮನಸೆಳೆಯುವ ಆಶಯ ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು ಆತಂಕಕಾರಿ ಮಟ್ಟಕ್ಕೆ ತಲುಪಿರುವ ಕಾರಣ ಅವುಗಳ ಬಗ್ಗೆ ಚರ್ಚಿಸುವ 2ನೇ ಶೈಕ್ಷಣಿಕ ಸಮಾವೇಶವಾಗಿದೆ.

ಈ ಹಿಂದೆ ಅಂದರೆ 2022ರ ಮಾಚ್ 12ರಂದು ಮೊದಲನೇ ಸಮ್ಮೇಳನವು ನಡೆದು ಕೆಲವು ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿತ್ತು. ಅದಕ್ಕೆ ಇಂದು ಕೂಡಾ ಅವುಗಳಿಗೆ ಸಂಬಂಧಪಟ್ಟ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಅಹ್ವಾನಿಸಿದ್ದು, ಅವರ ಸಮ್ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಿದೆ ಎಂದರು.

ನಗರದ ತರಾಸು ರಂಗಮಂದಿರದಲ್ಲಿ ಸೆ.4ರ ಸೋಮವಾರ ಬೆಳ್ಳಿಗ್ಗೆ 11ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ಚಾಮರಾಜನಗರ ನಳಂದ ಬೌದ್ಧ ವಿಹಾರ ಬೋಧಿಧತ್ತ ತೇರಬಂತೇಜಿ ದಿವ್ಯ ಸಾನಿಧ್ಯ ವಹಿಸುವರು.ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕರ್ನಾಟಕ ದ.ಸಂ.ಸ ಚಾಲನಾ ಸಮಿತಿ ಸದಸ್ಯ ಮಾವಳ್ಳಿ ಶಂಕರ್, ರಾಜ್ಯ ಬಿಎಸ್‍ಐ ಅಧ್ಯಕ್ಷ ಶಿವರಾಜ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಅಂದರೆ ಬೆಳಿಗ್ಗೆ 10ಗಂಟೆಗೆ ನಡೆಯುವ ಅಂಬೇಡ್ಕರ್ ಉತ್ಸವದ ಸಾಂಸ್ಕøತಿಕ ಮೆರವಣಿಗೆಯನ್ನು ಚಿತ್ರದುರ್ಗ ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಹಾಗೂ ಚಾಮರಾಜನಗರ ನಳಂದ ಬೌದ್ಧ ವಿಹಾರದ ಬೋಧಿಧತ್ತ ತೇರಾ ಬಂತೇಜಿ ಅವರು ಚಾಲನೆ ನೀಡುವರು.

ಸುಮಾರು 4-5ಸಾವಿರ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಉತ್ಸವ ಜಾಥಾ ಮೆರವಣಿಗೆಯಲ್ಲಿ ತಮಟೆ, ಕಹಳೆ, ಬ್ರಾಂಡ್ ಸೆಟ್ ನೊಂದಿಗೆ ಅಂಬೇಡ್ಕರ್ ಭಾವಚಿತ್ರವಿರುವ ಸಾರೋಟಿನ ಮೆರವಣಿಗೆ ನಡೆಯಲಿದ್ದು, ನಗರದ ಓನಕೆಒಭವ್ವ ವೃತ್ತದಲ್ಲಿನ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಆರಂಭವಾಗುವ ಉತ್ಸವ ಜಾಥಾ ಡಿ.ಸಿ.ಸರ್ಕಲ್, ಪ್ರವಾಸಿ ಮಂದಿರ, ಎಸ್‍ಬಿಐ ವೃತ್ತ, ಗಾಂಧಿ ವೃತ್ತ ಮೂಲಕ ಸಾಗಿ ಬಂದು ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗಳಿಗೆ ಪ್ರಮುಖ ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ಮಾರ್ಲಾಪಣೆ ಮಾಡಿ, ತರಾಸು ರಂಗಮಂದಿರಕ್ಕೆ ಬಂದು ಮುಕ್ತಾಯಗೊಳ್ಳಲಿದೆ. ಅನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಪಾಳ್ಯ ಸಿ.ಕುಮಾರ್, ಬಿಸ್ನಹಳ್ಳಿ ಜಯಪ್ಪ, ಬಿಎಸ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪರಮೇಶ್, ಉಪನ್ಯಾಸಕ ಯರದಕಟ್ಟೆ ಈ.ನಾಗೇಂದ್ರಪ್ಪ, ಭೀಮನಕೆರೆ ತಿಪ್ಪೇಸ್ವಾಮಿ, ಇಂದೂಧರ್ ಗೌತಮ್, ಬೆಳಗಟ್ಟ ಸಂತೋಷ, ಪ್ರಾಧ್ಯಾಪಕ ಮಹದೇವಪುರ ತಿಪ್ಪೇಸ್ವ್ವಾಮಿ, ಉಪನ್ಯಾಸಕ ಕಮಂಡಲಗುಂದಿ ಎಲ್. ಶಾಂತಕುಮಾರ್ ಇತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *