ಬೆಂಗಳೂರು: ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಇತ್ತೀಚೆಗೆ ಸಂವಿಧಾನ ಓದು ಪುಸ್ತಕ ಕೂಡ ಬರೆದಿದ್ದರು. ನಾನು ಕೂಡ ಓದಿದ್ದೇನೆ. ನನ್ನ ಪ್ರಕಾರ ಪ್ರತಿಯೊಬ್ವರೂ ಸಂವಿಧಾನ ಓದಲೇಬೇಕು, ಇದು ಕರ್ತವ್ಯ. ಅತ್ಯಂತ ಸರಳವಾಗಿ ಬರೆದು ಅಭಿಯಾನದ ಮೂಲಕ ಜನರ ಮುಂದಿಟ್ಟಿದ್ದರು. ಈ ಪುಸ್ತಕವನ್ನ ಓದಿದ ಮೇಲೆ ಅನೇಕ ಪ್ರಶ್ನೆಗಳು ಎದುರಾದವು ಎಂದಿದ್ದಾರೆ.
ಮೀಸಲಾತಿ ಅಂದ್ರೆ ಗೊತ್ತಿಲ್ಲ, ಅನಿವಾರ್ಯತೆ ಏನಿದೆ ಅಂದಿದ್ರು. ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟರೂ, ಅರ್ಥವಾದರೂ ವಿಕೃತ ಮನಸ್ಸಿನಿಂದ ಟೀಕಿಸಿದ್ರು. ನಮ್ಮಲ್ಲಿ ಸಾಮಾಜಿಕ ಅಸಮಾನತೆ, ರಾಜಕೀಯ ಅಸಮಾನತೆ ಇದೆ. ಕೆಲವೊಂದು ಪಟ್ಟಬದ್ರ ಹಿತಾಸಕ್ತಿಗಳಿಂದ ಈ ಅಸಮಾನತೆ ಉಂಟಾಗಿದೆ. ಈ ಹಿಂದೆ ಬ್ರಾಹ್ಮಣರು ಮಾತ್ರ ಓದಬೇಕಿತ್ತು. ಬ್ರಾಹ್ಮಣರು ಮಾತ್ರ ಅಧಿಕಾರ ಹೊಂದಬೇಕಿತ್ತು. ಇದು ಮೀಸಲಾತಿ ಅಲ್ವಾ..?.
ಕೊಳಕು ಕೆಲಸ ಬಿಟ್ಟ, ಅವರು ಮಜಾ ಮಾಡ್ತಿದ್ರು. ಇದು ಅಲಿಖಿತ ಮೀಸಲಾತಿ. ಸಮಾಜದಲ್ಲಿ ಅಸಮಾನತೆ ಉಂಟಾಗಲು ಕಾರಣರಾದವರೇ ಈಗ ಪ್ರಶ್ನೆ ಕೇಳ್ತಿರೋದು. ಮೀಸಲಾತಿ ವಿರೋಧಿಗಳಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಆಮೇಲೆ ಯಾವುದು ನಿಮ್ದು ಜಾತಿ ಅಂತ ಕೇಳ್ತಾರೆ. ಅಂಬೇಡ್ಕರ್ ಹೇಳಿದ್ರು, ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ, ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ರು. ವಿರೋಧ ಮಾಡಬೇಕಾದರವರು ಮೀಸಲಾತಿ ಬಗ್ಗೆ ಓದುತ್ತಾರೆ. ಮೀಸಲಾತಿ ಪಡೆಯದವರೇ ಮೀಸಲಾತಿ ಬಗ್ಗೆ ತಿಳಿದುಕೊಳ್ಳಲ್ಲ. ಮಂಡಲ್ ಯೋಜನೆ ಜಾರಿಯಾದಾಗ ಓಬಿಸಿಯವರು ಸಂಭ್ರಮಾಚರಣೆ ಮಾಡಿಲ್ಲ. ಬದಲಾಗಿ ಮೀಸಲಾತಿ ವಿರೋಧ ಮಾಡುವವರ ಜೊತೆ ಸೇರಿ ವಿರೋಧ ಮಾಡ್ತಾರೆ. ನಮ್ಮವರೇ ವಿರೋಧ ಮಾಡುತ್ತಿರುವಾಗ ಕೇಳ್ದೆ ಯಾಕ್ರಪ್ಪ ಅಂತ. ಇದರಿಂದ ಉದ್ಯೋಗ ಸಿಗುವುದಿಲ್ಲ ಅಂತೆ ಸರ್ ಎಂದು ಹೇಳಿದ್ರು.
ಅಂಬೇಡ್ಕರ್ ಅವರು ಎಸ್ಸಿ, ಎಸ್ಟಿಗೆ ಮೀಸಲಾತಿ ಕೊಟ್ಟರು. 90ರಲ್ಲಿ ಓಬಿಸಿ ಮೀಸಲಾತಿ ಸಿಕ್ಕಿದೆ. ವಿ.ಪಿ ಸಿಂಗ್ ಬಂದ ಮೇಲೆ ಮೀಸಲಾತಿ ಸಿಕ್ಕಿದೆ. ಆಗ ವಿರೋಧ ಮಾಡಿದವರು ಯಾರು ಗೋತ್ತಾ. ಈಗ ಅಂಬೇಡ್ಕರ್ ಬಗ್ಗೆ, ದಲಿತರ ಬಗ್ಗೆ ಮಾತಾಡುತ್ತಾರಲ್ಲ ಅವರೇ. ರಥಯಾತ್ರೆ ಮಾಡಿದವರು ಯಾರು. ಫ್ಯಾಕ್ಟ್ ಗಳ ಬಗ್ಗೆ ಮಾತಾಡಿದ್ರೆ ನಾವು ಬೈಸಿಕೊಳ್ಳಬೇಕು. ನಾನು ಒಬ್ಬ ಮಾತಾಡಿದ್ರೆ ಅವರು ಇಪ್ಪತ್ತು ಜನ ಮೇಲೆ ಬೀಳ್ತಾರೆ. ಆದರೆ ನಮ್ಮವರು ಒಬ್ಬರು ಮಾತಾಡಲ್ಲ. ಸಿದ್ದರಾಮಯ್ಯ ಬೈಸಿಕೊಳ್ಳಲ್ಲಿ ಅಂತಾರೆ. ಬೈಸಿಕೊಳ್ಳವವರೇ ಬಹು ಸಂಖ್ಯಾತರಾಗಿದ್ದೇವೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಸಿದ್ದರಾಮಯ್ಯ ವಾಗ್ದಾಳಿ, ಜೊತೆಗೆ ತಮ್ಮವರ ವಿರುದ್ಧ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ.