ಚಿತ್ರದುರ್ಗ : ಸಂಘಟನೆಯಲ್ಲಿ ನೌಕರರು ತಮ್ಮ ಪಾಲಿನ ನ್ಯಾಯಬದ್ಧ ಸೌಲಭ್ಯಗಳನ್ನು , ಹಕ್ಕುಗಳನ್ನು, ಪಡೆಯಲು ಸಂವಿಧಾನವೇ ಮೂಲ ಆಧಾರ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಲ್ಲಿ ಅಂಬೇಡ್ಕರ್ ಅವರ 131ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡಿ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಕೊಡಿಸುವಲ್ಲಿ ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ದೇಶದ ಎಲ್ಲಾ ಜನರಿಗೆ ಉಚಿತ ಶಿಕ್ಷಣ ಉಚಿತ ಆರೋಗ್ಯ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶೋಷಿತರಿಗೆ ದಲಿತರಿಗೆ ದೊರಕುವಂತಾಗಬೇಕು.
ಕೆಲವೇ ಕೆಲವು ಸಮುದಾಯಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಸಂವಿಧಾನಬದ್ಧವಾಗಿ ನೀಡುವ ಮೂಲಕ ಪ್ರತಿಯೊಬ್ಬರಲ್ಲಿಯೂ ಪ್ರಶ್ನಿಸುವ ಹಕ್ಕನ್ನು ಜಾಗೃತಿ ಗೊಳಿಸಿದ ಮಹಾನಾಯಕ ಎಂದು ಹೇಳಿದರು.
ಉಪಾಧ್ಯಕ್ಷ ವೀರಣ್ಣ ಮಾತನಾಡಿ ಸಂವಿಧಾನದ ರಚನೆ, ಅವರ ಸಾಧನೆಗಳು ತುಳಿತಕ್ಕೊಳಗಾದವರ ಪರವಾಗಿ ಮಾಡಿದ ಚಿಂತನೆಗಳು ಹೋರಾಟಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ಜಿ. ಆರ್, ಹಿರಿಯ ಉಪಾಧ್ಯಕ್ಷ ಶಿವಮೂರ್ತಿ, ರಾಘವೇಂದ್ರ, ಖಾಜಾಹುಸೇನ್, ಸಹ ಕಾರ್ಯದರ್ಶಿ ತಾಜಿರ್ , ಗವಿಸಿದ್ದೇಶ್, ಗುರುಮೂರ್ತಿ, ಚಂದ್ರನಾಯಕ್, ರಾಘವೇಂದ್ರ ತಿರುಮಲೇಶ್
ಹುಲಿ ಕುಂಟಪ್ಪ ಗೀತಮ್ಮ, ಕಾಂತರಾಜು, ಹನುಮಂತಪ್ಪ ,ರಾಜಪ್ಪ, ಕೃಷ್ಣಪ್ಪ, ವಡಕಲ್ ತಿಮ್ಮಣ್ಣ, ನಾಮನಿರ್ದೇಶಿತ ಸದಸ್ಯರು ನೌಕರರು ಉಪಸ್ಥಿತರಿದ್ದರು.