ಅಂಬೇಡ್ಕರ್.. ಗಾಂಧೀಜಿ ಬಗ್ಗೆ ಮಾತಾಡಬಾರದು ಅಂತ ಸಿಟಿ ರವಿ ಹೈಡ್ರಾಮಾ ಮಾಡಿದ್ರಾ..? ; ಮಧು ಬಂಗಾರಪ್ಪ ಹೇಳಿದ್ದೇನು..?

suddionenews
1 Min Read

 

ಬೆಂಗಳೂರು: ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ. ಅಶೋಕ್.. ಗೂಂಡಾಗಿರಿ ಅಂತ ಹೇಳಿ ಅವರೇ ಗೂಂಡಾಗಿರಿ ಮಾಡಿದ್ರು. ಸದ್ಯ ಪೊಲೀಸರು ಸಿಟಿ ರವಿಯನ್ನ ಕಾಪಾಡಿದ್ರು. ಪೊಲೀಸರು ರಕ್ಷಣೆಯನ್ನೇ ಮಾಡಬೇಕಿರೋದು. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಎರಡು ಕಣ್ಣಿದ್ದಂತೆ. ಆ ಎರಡನದನು ಒಟ್ಟಿಗೆ ನೋಡಿದ್ರೆ ಮಾತ್ರ ನಾವೂ ಮನುಷ್ಯರಾಗಿರ್ತೇವೆ ವಿನಃ, ಈ ಬಿಜೆಯವರ ತರಹ ಬಹುಶಃ ಅವರು ಗೂಡ್ಸೆ ಅವರ ಫೋಟೋ ಹಾಕಿ ಬಿಡ್ತಾರೆ. ಅವರು ಗೂಡ್ಸೆಯನ್ನ ದೇವರ ಸ್ಥಾನದಲ್ಲಿ ನೋಡುವವರು. ಇಂಥದ್ದನ್ನ ನಾವೂ ಖಂಡಿಸಬೇಕಿದೆ. ಸಿಟಿ ರವಿ ಅವರು ಮಾಡಿದ್ದು ಹೀನಾಯವಾದಂತದ್ದು.

ಪವಿತ್ರಾವಾದಂತ ಆ ಸ್ಥಳದಲ್ಲಿ ಆ ಒದ ಬಳಸಬಾರದು. ಸಾಮಾನ್ಯವಾಗಿಯೂ ಆ ಪದ ಬಳಕೆ ಮಾಡಬಾರದು ಜನಪ್ರತಿನಿಧಿಗಳು. ನನ್ನನ್ನು ಸೇರಿ. ಏನೋ ಮಿಸ್ ಆಗಿ ಬೇಡದ ಪದ ಬಳಕೆಯಾದಾಗಲೂ ಕ್ಷಮೆ ಕೇಳ್ತೀವಿ. ಆದರೆ ಅವರಿಂದ ಅದು ಆಗಲಿಲ್ಲ. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಿಂದ ಹಿಸ್ಟರಿ ತಗೊಂಡ್ರು ಬರೀ ಇದೆ ಆಗಿರೋದು. ಅವರ ಹಣೆಬರಹಕ್ಕೆ ಬಂಗರಪ್ಪಾಜೀ ಹೋಗದೆ ಇದ್ದರೆ ಗೆಲ್ಲುತ್ತಾನೇ ಇರಲಿಲ್ಲ. ಇದು ಬಿಜೆಯವರ ಸ್ಟಂಟ್. ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಮಾತಾಡಿದ್ರೆ ಡೈವರ್ಟ್ ಮಾಡ್ತಾರೆ. ಅವರ ಬಗ್ಗೆ ಯಾರಿಗೂ ಗೊತ್ತಾಗಬಾರದು. ಅಂಬೇಡ್ಕರ್ ಅವರ ಬಗ್ಗೆ ಮಾತಾಡುವಾಗ ಬದಲಾವಣೆ ಮಾಡ್ತಾರೆ. ನಮ್ಮ ಪಕ್ಷದವರೆಲ್ಲ ಅಂಬೇಡ್ಕರ್ ಅವರ ಫೋಟೋ ಹಿಡಿದುಕೊಂಡಿದ್ದೆವು. ಕೊನೆಗೆ ಅವರಿಗೆ ತಡೆಯುವುದಕ್ಕೆ ಆಗದೆ, ಬಿಜೆಪಿಯಿಂದ ಗೆದ್ದ ದಲಿತ ಸಮುದಾಯದವರು ನಮ್ಮದೇ ಫೋಟೋ ಹಿಡಿದು ಕೂತರು. ಯಾಕಂದ್ರೆ ಅವರ ರೈಟ್ಸ್ ಹಂಗಿದೆ. ಅಂಬೇಡ್ಕರ್ ಅವರ ಬಗ್ಗೆ ಚರ್ಚೆಯಾಗಬಾರದು ಅಂತ ಈ ರೀತಿ ಮಾಡಿದ್ದಾರೆ.

ಕಾನೂನು ಬದ್ಧವಾಗಿ ಬಿಡಿ ಎಂದಿದ್ದರೆ ಅವರು ಜಾಮೀನು ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿ ಇದೆಯಾ ಆ ಪದ ಬಳಕೆ ಮಾಡಬಹುದು ಎಂದು. ಬಿಜೆಪಿಯವರು ಪ್ರತಿಭಟನೆ ಮಾಡಿದ್ರಲ್ಲ ಮಂಗಳೂರಲ್ಲಿ ಈ ಪದ ಬಳಕೆ ಒಳ್ಳೆಯದು ಅಂತಾರೆ ಅವರು ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *