ಈಗಾಗಲೇ ಶ್ರೀಲಂಕಾ ಮತ್ತು ಬ್ರಿಟನ್ ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿ ಜನ ಎಷ್ಟು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ನೋಡಿದ್ದೇವೆ. ಮುಂದಿನ ಭವಿಷ್ಯದ ದಿನಕ್ಕಾಗಿ ಹಣವನ್ನು ಸಂಗ್ರಹಿಸಿ ಎಂದು ಅಮೇಜಾನ್ ಕಂಪನಿಯ ಮಾಲೀಕರೇ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು. ಹೀಗಾಗಿ ಶಾಪಿಂಗ್ ಮಾಡುವುದನ್ನು ಕಡಿಮೆ ಮಾಡಿ ಹಣವನ್ನು ಉಳಿಸಿ ಎಂದು ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಎಚ್ಚರಿಕೆ ನೀಡಿದ್ದಾರೆ. ಹೊಸ ಕಾರು, ಫ್ರಿಡ್ಜ್, ಟಿವಿಗಳನ್ನು ಅನಗತ್ಯಕ್ಕಿಂತ ಹೆಚ್ಚಿನ ಖರೀದಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಸದ್ಯದ ಸ್ಥಿತಿ ನೋಡಿದರೆ ಆರ್ಥಿಕತೆ ಉತ್ತಮವಾಗಿ ಕಾಣುತ್ತಿಲ್ಲ. ನಿಧಾನಗತಿಯಲ್ಲಿ ಸಾಗುತ್ತಿದೆ. ಹಲವು ಕ್ಷೇತ್ರಗಳಲ್ಲಿ ಈಗಲೇ ಹಿನ್ನೆಡೆ ಕಾಣುತ್ತಿದ್ದೀರಿ. ಮುಂಬರುವ ದಿನಕ್ಕಾಗಿ ಜನ ಈಗಿನಿಂದಲೇ ಹಣ ಕೂಡಿಡಬೇಕಾಗಿದೆ ಎಂದು ಅಮೆರಿಕ ಜನರಿಗೆ ಸಲಹೆ ನೀಡಿದ್ದಾರೆ.
ಇನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಈ ಹಿಂದೆ ಹವಮಾನ ವೈಪರೀತ್ಯ ಬದಲಾವಣೆಯನ್ನು ಎದುರಿಸಲು ಹಾಗೂ ಬಡ ಜನರಿಗೆ ತನ್ನ ಆಸ್ತಿಯಲ್ಲಿ ಬಹುಪಾಲನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಈಗ ಜನರಿಗೆ ಹಣ ಉಳಿಸಲು ಸಲಹೆ ನೀಡಿದ್ದಾರೆ. ಅವರ ಆಸ್ತಿಯಲ್ಲಿ ಎಷ್ಟು ಸಹಾಯ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.