ಅಮಾವಾಸ್ಯೆ ಬಂದ್ರೆ ಸಾಕು ಸೀರೆ ಉಟ್ಟು, ಬಳೆ ತೊಡುತ್ತಾರೆ : ಏನಿದು ಸೂರಜ್ ರೇವಣ್ಣ ಬಗ್ಗೆ ಹೇಳಿಕೆ..?

suddionenews
1 Min Read

ಬೆಂಗಳೂರು: ಅಸಹಜ ಲೈಂಗಿಕ ಕ್ರಿಯೆ ದೂರಿನ ಆಧಾರದ ಮೇಲೆ ಸೂರಜ್ ರೇವಣ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದರ ನಡುವೆಯೇ ಸಂತ್ರಸ್ತ ಭಯಾನಕ ಹೇಳಿಕೆಯೊಂದನ್ನು ನಿಡೀದ್ದಾರೆ. ಅಮಾವಾಸ್ಯೆ ಬಂತು ಅಂದ್ರೆ ಸೂರಜ್ ರೇವಣ್ಣ ಸೀರೆಯುಟ್ಟು, ಬಳೆ ತೊಟ್ಟು ನಿಲ್ಲುತ್ತಾರಂತೆ. ಈ ಹೇಳಿಕೆ ಕೇಳಿ ಎಲ್ಲರೂ ಶಾಜ್ ಆಗಿದ್ದಾರೆ‌.

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಸಂತ್ರಸ್ತ, 2019ರ ಚುನಾವಣಾ ಸಂದರ್ಭದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಿದ್ದೆ. ಅದಕ್ಕೆ ನನ್ನನ್ನು ಹೊಗಳಿ ನಂಬರ್ ತೆಗೆದುಕೊಂಡಿದ್ದರು. ಗುಡ್ ಈವ್ನಿಂಗ್ ಮೆಸೇಜ್ ನೊಂದಿಗೆ ಹಾರ್ಟ್ ಸಿಂಬಲ್ ಕಳುಹಿಸುತ್ತಿದ್ದರು. ಒಂದಿನ ಫಾರ್ಮ್ ಹೌಸ್ ಗೆ ಒಂಟಿಯಾಗಿ ಬಾ ಎಂದು ಕರೆದು ಬಲತ್ಕಾರದಿಂದ ಲೈಂಗಿಕ ಕ್ರಿಯೆ ನಡೆಸಿದರು. ಸೂರಜ್ ರೇವಣ್ಣ ಅವರಿಗೆ ಎರಡು ವ್ಯಕ್ತಿತ್ವವಿದೆ. ಅವರು ಸಾರ್ವಜನಿಕ ಜೀವನದಲ್ಲಿ ಇದ್ದ ಹಾಗೇ ವೈಯಕ್ತಿಕ ಜೀವನದಲ್ಲಿ ಇರುವುದಿಲ್ಲ.

ಸೂರಜ್ ರೇವಣ್ಣ ಒಬ್ಬ ಕಾಮುಕ. ಹೊರಗೆ ಒಂದು ಮುಖ ಇದೆ, ಒಳಗೆ ಇನ್ನೊಂದು ಮುಖ ಇದೆ. ನಾಲ್ಕು ವರ್ಷದಿಂದ ಯಾರಿಗೂ, ಎಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಾಗಿತ್ತು ನನ್ನದು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಅಮಾವಾಸ್ಯೆ ಬಂದರೆ ಸಾಕು ಸೀರೆಯುಟ್ಟು, ಬಲಕೆ ತೊಡುತ್ತಾರೆ ಎಂದು ಸಂತ್ರಸ್ತ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೂರಜ್ ರೇವಣ್ಣ ಸದ್ಯ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪುರುಷತ್ವ ಪರೀಕ್ಷೆಗೂ ಈಗಾಗಲೇ ಒಳಪಡಿಸಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯ ಬಗ್ಗೆ ಸೂರಜ್ ರೇವಣ್ಣ ಬಳಿ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks