ವಿಕಲಚೇತನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸದಾ ಸಿದ್ದ : ಶಾಸಕ ಕೆ.ಸಿ. ವೀರೇಂದ್ರ

1 Min Read

 

ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ :  98808 36505

ಚಿತ್ರದುರ್ಗ : ವಿಕಲಚೇತನರು ಸ್ವಾವಲಂಬಿಯಾಗಿ  ಬದುಕು ಕಟ್ಟಿಕೊಳ್ಳಬೇಕು. ಮನೆಯವರಿಗೆ ಹೊರೆಯಾಗದಂತೆ ಅವರವರ ಕಾಲ ಮೇಲೆ ನಿಂತುಕೊಂಡು ಅವರು ದುಡಿಯುತ್ತೇನೆ ಎಂಬ ನಂಬಿಕೆ ಬರಬೇಕು ಎಂದು ಶಾಸಕ ವೀರೇಂದ್ರ ತಿಳಿಸಿದರು.

ಅವರು ತಾಲ್ಲೂಕಿನ ಹುಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ವಿಕಲಚೇತನ ಕ್ಷೇಮಾಭಿವೃದ್ಧಿ ಹಾಗೂ ಕೌಶಲ್ಯ ಅಭಿವೃದ್ಧಿ  ಕೇಂದ್ರಉದ್ಘಾಟನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಗವಿಕಲರಿಗೆ ವಿಕಲಚೇತನ ಕ್ಷೇಮಾಭಿವೃದ್ಧಿ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರ ಸಹಕಾರವಾಗುತ್ತದೆ. ಹುಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 23 ಜನ ಅಂಗವಿಕಲರಿದ್ದು ಇವರು ಯಾರಿಗೂ ಹೊರೆಯಾಗದಂತೆ ಸ್ವಾವಲಂಬಿಯಾಗಿ ಜೀವನ ಮಾಡಲು ಈ ಕೇಂದ್ರವನ್ನು ತೆರೆದಿದ್ದೇವೆ.

ಈ ಕೇಂದ್ರದಲ್ಲಿ ಟೈಲರಿಂಗ್ ತರಬೇತಿ, ಕಂಪ್ಯೂಟರ್ ಶಿಕ್ಷಣ ಹಾಗೂ ಅವರಿಗೆ ಬೇಕಾದ ಬ್ಯಾಂಕಿನ ಸಾಲ ಸೌಲಭ್ಯಗಳನ್ನು ಒದಗಿಸಲು ಈ ಕೇಂದ್ರ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ತಾಲೂಕಿನ ಸುಮಾರು 23 ಗ್ರಾಮ ಪಂಚಾಯಿತಿಗಳಲ್ಲಿ, ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತೇವೆ. ಅದಕ್ಕೆ ಬೇಕಾದ ಹಣವನ್ನು ಶಾಸಕರ ನಿಧಿಯಿಂದ ಕೊಡುತ್ತೇವೆ. ಸುಮಾರು ಐದು ಲಕ್ಷದಿಂದ 10 ಲಕ್ಷದವರೆಗೆ ಹಣ ನೀಡುತ್ತೇವೆ.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ‌ಎಂ.ನಯನ್ ಕುಮಾರ್, ಆರ್. ರವಿಕುಮಾರ್, ಹೆಚ್.ಎಂ. ಕಲ್ಲೇಶ್ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *