ಸುದ್ದಿಒನ್, ಮೈಸೂರು, ಜನವರಿ.07 : ಮೈಸೂರಿನ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಳೆ ಬೇರು ಹೊಸ ಚಿಗುರಿನ ಸಮಾಗಮವಾಗಿದೆ.
ದೇಶದ ಯಾವುದೇ ಮೂಲೆಗೆ ಹೋದರು ಅಲ್ಲೊಬ್ಬರು ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿದ್ಯಾರ್ಥಿ (ಪತ್ರಕರ್ತರು) ಸಿಗುತ್ತಾರೆ. ಇಂತಹ ಭವ್ಯ ಇತಿಹಾಸದ ವಿಭಾಗದಲ್ಲಿ ಇದೀಗ 1971ರ ಬ್ಯಾಚ್‌ನಿಂದ ಹಿಡಿದು ಈವರೆಗೂ ಸ್ನಾತಕೋತ್ತರ ಪದವಿ ಪಡೆದವರನ್ನು ಒಂದೇ ಸೂರಿನಡಿ ತರಲು ‘ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘ’ ರಚನೆ ಮಾಡಲಾಯಿತು.
ಸಂಘದ ಪ್ರಥಮ ಅಧ್ಯಕ್ಷೆಯಾಗಿ ಪ್ರೊ.ಎಂ.ಎಸ್.ಸಪ್ಪ, ಉಪಾಧ್ಯಕ್ಷರಾಗಿ ಡಾ. ಗೌತಮ್ ಮಾಚಯ್ಯ, ಕಾರ್ಯದರ್ಶಿಯಾಗಿ ಡಾ.ಸಿ.ರಾಕೇಶ್, ಸಹ ಕಾರ್ಯದರ್ಶಿಯಾಗಿ ಜವರೇಗೌಡ, ಗೌರವಾಧ್ಯಕ್ಷರಾಗಿ ಪ್ರೊ.ಆರ್.ಎನ್. ಪದ್ಮನಾಭ್, ಗೌರವ ಕಾರ್ಯದರ್ಶಿಯಾಗಿ ಪ್ರೊ.ಕೆ.ಜೆ.ಜೋಸೆಫ್, ಖಜಾಂಚಿಯಾಗಿ ಎಂ.ಬಿ.ಶ್ರೀನಿವಾಸ್ ಗೌಡ, ನಿರ್ದೇಶಕರಾಗಿ ಪ್ರೊ .ಎನ್. ಉಷಾರಾಣಿ, ಎಚ್.ವಿ.ಅರುಣ್ ಕುಮಾರ್, ಶೈಲೇಶ್ ರಾಜ್ ಅರಸ್, ರುದ್ರಗೌಡ ಮುರಾಳ, ಡಾ.ನಿವೇದಿತಾ ಲೋಕೇಶ್, ದ.ಕೋ.ಹಳ್ಳಿ ಚಂದ್ರಶೇಖರ್, ಕವನ ಜೈನ್, ಸ್ಮಿತಾ ಎಂ.ಎಸ್., ಟಿ.ಆರ್.ಸತೀಶ್ ಕುಮಾರ್, ಎಚ್.ಎನ್.ವೆಂಕಟೇಶ್, ಪ್ರೀತಿ ನಾಗರಾಜ್, ಕೆ.ಪಿ.ಓಂಕಾರ ಮೂರ್ತಿ, ನಾಗೇಶ್ ಪಾಣತ್ತಲೆ, ಲೋಕೇಶ್ ಮೊಸಳೆ ಅವರನ್ನು ನೇಮಕ ಮಾಡಲಾಯಿತು.
ಹಲವು ವರ್ಷಗಳ ಬಳಿಕ ಸಮಾವೇಶ ಗೊಂಡ ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. 1971ರ ಬ್ಯಾಚ್‌ನಿಂದ ಹಿಡಿದು 2023ರವರೆಗೂ ಸ್ನಾತಕೋತ್ತರ ಪದವಿ ಪಡೆದಿರುವ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪರೂಪದ ಕ್ಷಣವನ್ನು ಕಣ್ಣುಂಬಿಕೊಂಡರು. ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಇನ್ನೂ ಕೆಲವರು ಫೋಟೊ ಕ್ಲಿಕ್ಕಿಸಿಕೊಂಡರು. ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿದರು.
ಹಿರಿಯ ವಿದ್ಯಾರ್ಥಿಗಳಾದ ಸುದರ್ಶನ ಚನ್ನಂಗಿಹಳ್ಳಿ, ಕೆ.ಪಿ.ನಾಗರಾಜ್, ಜಡಿಯಪ್ಪ, ಗಿರೀಶ್, ರವಿ ಪಾಂಡವಪುರ, ಮುರುಳಿ, ಲಲಾಟಾಕ್ಷ, ಪವಿತ್ರಾ, ಮಾನಸ ಕಿಲಾರ, ಉಷಾ ಪ್ರೀತಮ್, ಎಸ್. ತಿಪ್ಪೇಸ್ವಾಮಿ, ದಯಾಶಂಕರ್ ಮೈಲಿ, ಕಮಲ್ ಗೋಪಿನಾಥ್, ಡಾ.ಮರಿಸ್ವಾಮಿ, ಲಕ್ಷ್ಮೀಕಾಂತ್, ಮುರುಳಿ ಮೋಹನ್ ಸೇರಿದಂತೆ ಅನೇಕರು ಸಂಭ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ಮುನ್ನ ಇತ್ತೀಚಿಗೆ ನಿಧನರಾದ ಪ್ರೊ. ಮಹೇಶಚಂದ್ರ ಗುರು, ಡಾ. ಪ್ರಮೀಳಾ ಬಿ. ಕುನ್ನೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.