ಅಂಬರೀಶ್ ಪುತ್ರನ ಮದುವೆ ಬೆಂಗಳೂರಲ್ಲಿ ನಡೆದರೂ.. ಬೀಗರೂಟ ಮಂಡ್ಯದಲ್ಲಿ ನಡೆಯಲಿದೆ..!

suddionenews
1 Min Read

ಹೇಳಿ ಕೇಳಿ ಅಂಬರೀಶ್ ಅವರು ಹುಟ್ಟಿ ಬೆಳೆದ ಊರು ಮಂಡ್ಯ ಜಿಲ್ಲೆ. ಅಂಬರೀಶ್ ಮೇಲಿನ ಅಭಿಮಾನದಿಂದ ಮಂಡ್ಯದ ಜನತೆ ಸುಮಲತಾ ಅವರ ಕೈಹಿಡಿದಿದ್ದಾರೆ. ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದೀಗ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಮದುವೆ ನಡೆಯುತ್ತಿದೆ, ಮಂಡ್ಯದಲ್ಲಿಯೇ ಬೀಗರ ಊಟ ನೆರವೇರಲಿದೆ.

ಸೆಲೆಬ್ರೆಟಿಗಳ ಫೇಮಸ್ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ್ಪ ಅವರ ಮಗಳು ಅವಿವಾ ಬಿಡಪ್ಪ ಮತಚತು ಅಭಿಷೇಕ್ ಅಂಬರೀಶ್ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ‌. ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ. ಜೂನ್ 7ರಂದು ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಆದರೆ ಜೂನ್ 17ಕ್ಕೆ ಮಂಡ್ಯದಲ್ಲಿ ಬೀಗರ ಔತಣಕೂಟ ನಡೆಯಲಿದೆ. ಎಲ್ಲಾ ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ. ನವದಂಪತಿಯನ್ನು ಕಣ್ತುಂಬಿಕೊಂಡು, ಬೀಗರ ಔತಣಕೂಟ ಸವಿದು, ಹಾರೈಸಲು ಹೋಗಬಹುದು.

ಇನ್ನು ಅವಿವಾ ಬಿಡಪ ಅವರನ್ನು ಅಭಿಷೇಕ್ ಅಂಬರೀಶ್ ಅವರು ಒಂದು ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.4-5 ವರ್ಷ ಡೇಟಿಂಗ್ ನಲ್ಲಿದ್ದ ಜೋಡಿ ಇತ್ತಿಚೆಗೆ ನಿಶ್ಚಿತಾರ್ಥ ಮಾಡಿಕೊಂಡು, ಈಗ ಮದುವೆಯಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks