ಸರ್ಕಾರಿ ಜಮೀನು ಒತ್ತುವರಿ ಆರೋಪ ; ಸೈಲೆಂಟ್ ಆಗಿದ್ದ ಹೆಚ್ಡಿಕೆ ಸಿಡಿದೆದ್ದು ಹೇಳಿದ್ದೇನು..?

1 Min Read

 

 

ಬೆಂಗಳೂರು; ಕೇತಗಾನಹಳ್ಳಿಯಲ್ಲಿ ಸರ್ಕಾರಿ ಒತ್ತುವರಿ ಆರೋಪ ಹೊತ್ತಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ವೇ ಆದರೂ ಕೂಡ ಸೈಲೆಂಟ್ ಆಗಿದ್ದರು. ಇದೀಗ ಸುದ್ದಿಗೋಷ್ಟಿ ನಡೆಸಿ ವೈಲೆಂಟ್ ಆಗಿದ್ದಾರೆ. ನನಗೆ ನೋಟೀಸ್ ಕೊಡುವುದು ಇರಲೊ. ಕೆಳಹಂತದ ಅಧಿಕಾರಿಗಳನ್ನು ನಾನು ಪ್ರಶ್ನೆ ಮಾಡಲ್ಲ. ಎಸ್ಐಟಿ ತಂಡ ರಚಿಸಿ, ತನಿಖೆ ನಡೆಸಿದ್ದಾರೆ. ಇದು ಇತಿಹಾಸದಲ್ಲಿಯೇ ಪ್ರಥಮ.

ಈ ಸರ್ಕಾರಕ್ಕೆ ಸವಾಲು ಹಾಕುವುದಕ್ಕೆ ನಾನು ಬಂದಿದ್ದೇನೆ. ಇಂದಿನಿಂದ ಸರ್ಕಾರದ ವಿರುದ್ಧ ನನ್ನ ಯುದ್ಧ ಆರಂಭ ಮಾಡುತ್ತಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಯ ಕೆಲಸಗಳು ನಡೆಯುತ್ತಿವೆ. ಗಜನಿ, ಮಹಮ್ಮದ್ ಸೇರಿ ಈ ಹಿಂದೆ ಮೂರು ಜನ ಪ್ರಮುಖರು ಇದ್ದರು. ಈ ಸರ್ಕಾರದ ಬಗ್ಗೆ ಮಾತನಾಡಿದ್ರೆ ನಿರಾಸೆ ಆಗಬಹುದು. ಹನಿಟ್ರ್ಯಾಪ್, ಕೊಲೆ ಸುಪಾರಿ ಬಗ್ಗೆ ಚರ್ಚೆಯಾಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ನೋಡಿ.

ನಾನು ಹೇಳುವ ವಿಚಾರಗಳನ್ನು ಜನರ ಮುಂದೆ ಇಡಬಹುದು. ಈ ಸರ್ಕಾರಕ್ಕೆ ಸವಾಲು ಹಾಕಲು ನಾನು ಬಂದಿದ್ದೇನೆ. ಸರ್ಕಾರದ ವಿರುದ್ಧ ನನ್ನ ಯುದ್ಧ. 40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದೆ. ದ್ವೇಷ ರಾಜಕಾರಣ ನಡೆಯುತ್ತಿದೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಪಿ, 25-30 ಅಧಿಕಾರಿಗಳು, ಪೊಲೀಸರು ಬೇರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆಂದು ಪೊಲೀಸರನ್ನ ಕರೆದುಕೊಂಡು ಬಂದಿದ್ದರು. 70 ಎಕರೆ ಒತ್ತುವರಿ ಅಂತೆ. ನನ್ನಲ್ಲಿ 40 ಎಕರೆ ಮಾತ್ರ ಇದೆ. ಅತಿಕ್ರಮಣ, ಅಕ್ರಮ ಮಾಡಿದ್ರೆ ದಾಖಲೆ ಬಿಡುಗಡೆ ಮಾಡಲಿ ಅಂತ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *