ಚಿಕ್ಕಬಳ್ಳಾಪುರ: ನಿನ್ನೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ನಗರದಿಂದ ಹಲವೆಡೆ ಸಂಚರಿಸಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಜನ ಹೆಚ್ಚಾಗಿದ್ದರು. ಆದ್ರೆ ಈಗ ಆ ಕಾರ್ಯಕ್ರಮಕ್ಕೆ ಹೋದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಗತಿ ಪ್ರತಿಮೆ ಕಾರ್ಯಕ್ರಮ ಉದ್ಘಾಟನೆಗೆ ಮೋದಿ ಬಂದಿದ್ದರು.ಒಬ್ಬೊಬ್ಬರಿಗೆ 500 ರೂಪಾಯಿ ನೀಡುವುದಾಗಿ ಹೇಳಿ , ಕರೆದುಕೊಂಡು ಬಂದಿದ್ದರಂತೆ. ಈಗ ಹಣ ನೀಡದೆ ಮೋಸ ಮಾಡುತ್ತಿದ್ದಾರೆ ಎಂದು 40 ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು ಮಾಡಿದ ಆರೋಪ ಹೀಗಿದೆ : ಪ್ರಗರಿ ಪ್ರತಿಮೆ ಉದ್ಘಾಟನೆಗೆ ಕೂಲಿ ಕಾರ್ಮಿಕರು ಬೇಕು ಎಂದು ಹೇಳಿದ್ದರು. ಅದಕ್ಕೆ 40 ಜನ ಕೂಲಿ ಕಾರ್ಮಿಕರು ಬೇಕು ಎಂದು ಕೇಳಿದ್ದರು. ಬಿಜೆಪಿ ಕಾರ್ಯಕರ್ತ ನಂದೀಶ್ ಬಂದಿದ್ದರು. ಪ್ರತಿಯೊಬ್ಬರಿಗೂ 500 ರೂಪಾಯಿ ಕೊಡುತ್ತೇವೆ ಎಂದಿದ್ದರು. ಆದರೆ ಹಣ ಕೇಳಿದಾಗ 100 ರೂಪಾಯಿ ಕೊಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.