Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಖಾದಿಯನ್ನು ಹಾಕಿದವರೆಲ್ಲಾ ಗುರುಗಳಾಗಲು ಸಾಧ್ಯವಿಲ್ಲ : ಶ್ರೀ ಶಿವಲಿಂಗಾನಂದ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್
ಮೊ : 98862 95817

ಚಿತ್ರದುರ್ಗ,(ಜು.04) :  ಮಾನವನ ಮನಸ್ಸಿನ ದುಃಖವನ್ನು ದೂರ ಮಾಡುವವನೇ ಗುರು ಎಂದು ನಗರದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಿನ್ನೆ
(ಸೋಮವಾರ) ಸಂಜೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಾನವ ದುಃಖದಲ್ಲಿ ಇದ್ದಾಗ ಅದನ್ನು ದೂರ ಮಾಡುವುದು ಗುರುವಿನ ಕೆಲಸವಾಗಿದೆ. ಇದನ್ನು ಅರಿಯುವುದು ಭಕ್ತನಾದವನ ಕೆಲಸವಾಗಿದೆ. ಯಾವುದೇ ಗುರು ಭಕ್ತನ ಜಾತಿಯನ್ನು ನೋಡಿ ಉಪದೇಶವನ್ನು ಮಾಡುವುದಿಲ್ಲ, ಅದೇ ರೀತಿ ವಿದ್ಯೆಯನ್ನು ಕಲಿಸುವ ಗುರು ಸಹಾ ಶಿಷ್ಯರ ಜಾತಿಯನ್ನು ನೋಡಿ ಕಲಿಸುವುದಿಲ್ಲ, ಶಿಷ್ಯನ ಶ್ರದ್ದೆಯನ್ನು ನೋಡಿ ಕಲಿಸುತ್ತಾನೆ. ಇಲ್ಲಿ ಜಾತಿಗಿಂತ ಶ್ರದ್ದೆ ಮುಖ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ಇಂದಿನ ದಿನಮಾನದಲ್ಲಿ ಮೊಬೈಲ್ ಬಳಕೆ ಮತ್ತು ಟಿ.ವಿ. ನೋಡುವುದರಿಂದ ಜನರಲ್ಲಿ ಭಕ್ತಿ ಕಡಿಮೆಯಾಗಿದೆ. ಖಾದಿಯನ್ನು ಹಾಕಿದವರೆಲ್ಲಾ ಗುರುಗಳಾಗಲು ಸಾಧ್ಯವಿಲ್ಲ, ಭಕ್ತನನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವನೇ ನಿಜವಾದ ಗುರುವಾಗುತ್ತಾನೆ. ಗುರುವಿನ ಆಶೀರ್ವಾದವನ್ನು ಪಡೆಯುವಾಗ ಭಕ್ತನಾದವನು ಸರಿಯಾದ ರೀತಿಯಲ್ಲಿ ನಡೆಯಬೇಕಿದೆ ಎಂದು ಶಿವಲಿಂಗಾನಂದ ಶ್ರೀಗಳು ಹೇಳಿದರು.

ಸಮಾರಂಭವನ್ನು ಉದ್ಘಾಟನೆಯನ್ನು ನೇರವೇರಿಸಿದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಸಾಲಿಮಠ್ ಮಾತನಾಡಿ, ಕತ್ತಲ್ಲಿನಲ್ಲಿರುವ ಶಿಷ್ಯನನ್ನು ಸರಿಯಾದ ದಾರಿಗೆ ಕೊಂಡ್ಯೂದು ಬೆಳಕಿನಡೆಗೆ ಕರೆದು ಕೊಂಡು ಹೋಗಬೇಕಾಗಿರುವುದು ಗುರುವಾದವನ ಕೆಲಸವಾಗಿದೆ. ಭಕ್ತಿಯ ಲೋಕದಲ್ಲಿ ಗುರು-ಶಿಷ್ಯನ ಸಂಬಂಧ ಉತ್ತಮವಾಗಿರುತ್ತದೆ. ನನ್ನ 45 ವರ್ಷದ ಭೋದನೆಯ ವೃತ್ತಿಯಲ್ಲಿ ಸ್ವಾಮಿಗಳ ಪ್ರಬಾವ ಹೆಚ್ಚಾಗಿದೆ. ಗುರುವಾದವನು ಶಿಷ್ಯರಿಗೆ ಬೆಳಕನ್ನು ನೀಡುವ ಕಾರ್ಯವನ್ನು ಮಾಡಬೇಕಿದೆ. ಶಿಷ್ಯನಲ್ಲಿ ಇರುವ ಕೀಳಿರಿಮೆಯನ್ನು ತೊರೆಯುವುದು ಗುರುವಿನ ಕೆಲಸವಾಗಿದೆ ಎಂದರು.

ಗುರುವಿನ ಪಾದದ ಧೂಳು ಶಿಷ್ಯನ ಜೀವನವನ್ನು ಪಾವನ ಮಾಡುತ್ತದೆ. ಗುರುಗಳಾದವರು ಬೇರೆಯವರ ಹಣಕ್ಕೆ ಆಸೆಯನ್ನು ಪಡಬಾರದು, ನನಗೆ ಗುರುವಿನ ಕರಣೆ ಇರುವುದರಿಂದ ನಾನು ಎಂ.ಎ.ಯನ್ನು ಕಲಿತು ಮೂರನೇ ರ‍್ಯಾಂಕ್ ಪಡೆಯಲು ಸಹಾಯವಾಗಿದೆ. ಗುರು-ಶಿಷ್ಯನ ನಡುವಿನ ಸಂಬಂಧ ಅವಿನಾಭವ ಸಂಬಂಧವಾಗಿದೆ. ಒಂದು ಕಲ್ಲಿನ್ನು ಮೂರ್ತಿಯನ್ನಾಗಿ ಮಾಡುವುದು ಗುರುವಿನ ಕೆಲಸವಾಗಿದೆ. ಇದು ಅಭೀಮಾನ ಮತ್ತು ಭಕ್ತಿಯ ಗುರು ಪೂರ್ಣಿಮಾ ಆಗಿದೆ ಎಂದು ಸಾಲಿಮಠ್ ತಿಳಿಸಿದರು.

ಯೋಗ ಗುರು ಗೋವಿಂದಸ್ವಾಮಿ ಮಾತನಾಡಿ, ಮಾನವನಲ್ಲಿ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ತುಂಬವವನೇ ಗುರು, ಗುರುವಿನ ಕರುಣೆಯನ್ನು ಪಡೆಯದ ಶಿಷ್ಯ ಉತ್ತಮವಾದ ಬದಕನ್ನು ನಡೆಸಲು ಸಾಧ್ಯವಿಲ್ಲ, ಗುರುವಿಗೆ ಶರಣಾಗತಿಯನ್ನು ಹೊಂದಿದ ಭಕ್ತ ಮಾತ್ರ ಸನ್ಮಾರ್ಗವನ್ನು ಹೊಂದಲು ಸಾಧ್ಯವಿದೆ. ಈ ರೀತಿಐಆದ ಮಠ ಮತ್ತು ಮಂದಿರದಲ್ಲಿ ಭಕ್ತಿ ದೂರಕಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಶಾಖಾ ಮಠದ ಕಾರ್ಯದರ್ಶಿ ರಾಮಮೂರ್ತಿ, ಶಿಕ್ಷಕರಾದ ನಿರಂಜನ ದೇವರಮನೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಶ್ರೀಮಠದ ಭಕ್ತರಾಗಿದ್ದ ನೀಲಪ್ಪ ಮತ್ತು ಸಿದ್ದೇಶ್ ಯಾದವ್ ರವರ ನಿಧನಕ್ಕೆ ಸಂತಾಪವನ್ನು ಸೂಚಿಸಿ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ಸುಬ್ರಾಯಭಟ್ ರವರು ವೇದ ಘೋಷವನ್ನು ಮಾಡಿದರೆ ಶಿಕ್ಷಕಿ ಶ್ರೀಮತಿ ಸುಮನ ಪ್ರಾರ್ಥಿಸಿದರು, ತಿಪ್ಪೇಸ್ವಾಮಿ ಸ್ವಾಗತಿಸಿದರೆ ವೀರಣ್ಣ ಕಾರ್ಯಕ್ರಮ ನಿರೂಪಿಸಿದರು.

ಆಯಿತೋಳ ವಿರೂಪಾಕ್ಷಪ್ಪ ಮತ್ತು ಸಂಗಡಿಗರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!