ಬೆಂಗಳೂರು: ವಿಧಾನಪರಿಷತ್ ನಲ್ಲಿ ಇಂದು ಮೃತ ವಿದ್ಯಾರ್ಥಿ ನವೀನ್ ವಿಚಾರ ಸದ್ದು ಮಾಡಿದೆ. ಈ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಪೋಷಕರ ನೋವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಉಕ್ರೇನ್ ನಲ್ಲಿ ನವೀನ್ ನಿಧನರಾಗಿದ್ದಾರೆ. ನವೀನ್ ಅವರ ತಂದೆ ತಾಯಿ ಮಗ ಸತ್ತಾನ ಅಂದಿದ್ದಾರೆ. ಅವರ ಅಂತ್ಯ ಸಂಸ್ಕಾರ ಮಾಡೋಕು ಆಗಿಲ್ಲ. ಕಡೆ ಸಂಸ್ಕಾರ ಮಾಡೋಕು ಆಗಿಲ್ಲ. ಎಲ್ಲರ ಮಕ್ಕಳು ಜೀವಂತ ಬಂದಿದ್ದಾರೆ. ನನ್ನ ಮಗನ ಮೃತದೇಹ ಆದ್ರೂ ತರಿಸಿ ಎಂದಿದ್ದಾರೆ.
ನಾನು ಈ ಬಗ್ಗೆ ಅವರಿಗೆ ನಿನ್ನೆ ಸಮಾಧಾನ ಹೇಳಿದ್ದೇನೆ. ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ಆ ಮೃತದೇಹವನ್ನ ತರಿಸುವ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಪ್ರಧಾನಮಂತ್ರಿ ಕೂಡ ಹೇಳಿದ್ದಾರೆ. ಮೃತದೇಹ ತರಿಸಿಕೊಡುವುದಾಗಿ ಹೇಳಿದ್ದಾರೆ. ಘಟನೆ ನಡೆದು ಇವತ್ತಿಗೆ ಹದಿನಾಲ್ಕು ದಿನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.