ಚಿತ್ರದುರ್ಗದಲ್ಲಿ ಫೆಬ್ರವರಿ 3 ಮತ್ತು 4 ರಂದು ಅಖಿಲ ಭಾರತ ಓಪನ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿ : ಶಂಕರ್

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಫೆ. 02 : ನಗರದ ಅನುಭವ ಮಂಟಪದಲ್ಲಿ ಫೆಬ್ರವರಿ 3 ಮತ್ತು 4 ರಂದು ಅಖಿಲ ಭಾರತ ಓಪನ್ ಕರಾಟೆ ಚಾಂಪಿಯನ್ ಶಿಫ್ ಮೇಘಾ ಕೆಸಿವಿ ಕಪ್ ಪಂದ್ಯಾವಳಿ ನಡೆಯಲಿದೆ ಎಂದು ಬ್ರೈಟ್ ಸ್ಟಾರ್ ಕರಾಟೆ ಅಸೋಶಿಯೇಷನ್ ಸಂಸ್ಥಾಪಕ ಶಂಕರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 29 ನೇ ರಾಷ್ಟ್ರ ಮಟ್ಟದ ಪಂದಾವಳಿ ಇದಾಗಿದ್ದು, ಪಶ್ಚಿಮ ಬಂಗಾಳ, ತಮೀಳುನಾಡು, ಕೇರಳ, ಪಂಜಾಬ್, ಅಂಧ್ರ ಪ್ರದೇಶ, ತೆಲಾಂಗಣ ಮತ್ತು ಕರ್ನಾಟಕದಿಂದ 1500 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ವಿವಿಧ ರಾಜ್ಯಗಳಿಂದ 40 ಜನ ತೀರ್ಫುಗಾರರು ಆಗಮಿಸಲಿದ್ದಾರೆ.

6-25 ವರ್ಷ ವಯೋಮಾನದ ಕ್ರೀಡಾಪಟುಗಳಿಗೆ ಸ್ಪರ್ಧೆಗಳು ನಡೆಯಲಿದ್ದು, ಇದರಲ್ಲಿ 18-25 ವರ್ಷದೊಳಗಿನ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುವಿಗೆ 25 ಸಾವಿರ ನಗದು ನೀಡಲಾಗುವುದು ಮತ್ತು ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುವಿಗೆ ಆಕರ್ಷಕ ಟ್ರೋಫಿ ಹಾಗೂ ಪದಕಗಳನ್ನು ನೀಡಲಾಗುವುದು ಎಂದರು.

ಪಂದ್ಯಾವಳಿಯು ಫೆ.3 ರಂದು ಬೆಳಗ್ಗೆ 11.30ಕ್ಕೆ ಪಂದ್ಯಾವಳಿ ಉದ್ಘಾಟನೆ ಆಗಲಿದ್ದು, ಚಲನಚಿತ್ರ ನಟ ಸುಮನ್ ತಳವಾರ್, ಕ್ರೀಡಾ ಸಚಿವ ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ಸಂಗಮೇಶ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಮಾಜಿ ಆಧ್ಯಕ್ಷ ಬಿ.ಕಾಂತರಾಜ್, ಚಿತ್ರ ನಟ ದೊಡ್ಡಣ್ಣ, ರಘು ಚಂದನ್, ಸಂದೀಪ್, ಭಾಸ್ಕರ್, ಸುರೇಶ್ ಬಾಬು, ಸೂರಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶೇಖರ್, ಸುರೇಶ್, ತಿಪ್ಪೇಸ್ವಾಮಿ, ತಿಪ್ಪೇಶ್, ಇರ್ಫಾನ್, ಕಿಶೋರ್ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *