ಬೆಂಗಳೂರು: ಇಂದು ಎಲ್ಲರ ಮೊಬೈಲ್ ಗೂ ಅಲರ್ಟ್ ಮೆಸೇಜ್ ಬಂದಿದೆ. ಅದು ಏಕಕಾಲಕ್ಕೆ. ಕಳೆದ ಎರಡ್ಮೂರು ದಿನದ ಹಿಂದೆಯೇ ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿತ್ತು. ಅದನ್ನು ಓದಿದವರಿಗೆ ಇಂದು ಶಾಕ್ ಅಂತ ಏನು ಅನ್ನಿಸಿಲ್ಲ. ಆದರೆ ಏಕಕಾಲಕ್ಕೆ ಮೆಸೇಜ್ ನಲ್ಲಿ ಅದರಲ್ಲೂ ಎಮರ್ಜೆನ್ಸಿ ಅಲರ್ಟ್ ಅಂತ ಬಂದಿದ್ದು ನೋಡಿ ಕೆಲವರು ಶಾಕ್ ಆಗಿದ್ದಾರೆ.
ಹೀಗೆ ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಏಕಕಾಲಕ್ಕೆ ಎಲ್ಲರ ಮೆಸೇಜ್ ನಲ್ಲೂ ಗುರ್ ಗುರ್ ಸೌಂಡ್ ಕೇಳಿಸಿದೆ. ಈ ಸೌಂಡ್ ಕೇಳಿ ಮಾತು ನಿಲ್ಲಿಸಿದ ಡಿಸಿಎಂ, ಒಂದು ಕ್ಷಣ ಎಲ್ಲರ ಮುಖವನ್ನು ನೋಡಿದ್ದಾರೆ. ಏನಾಗ್ತಿದೆ ಎಂಬ ಪ್ರಶ್ನೆಯನ್ನು ಕೇಳುವಂತೆ ಇತ್ತು. ಬಳಿಕ ಅಕ್ಕ ಪಕ್ಕ ಇದ್ದವರೇ ಇದು ಕೇಂದ್ರ ಸರ್ಕಾರದಿಂದ ಬಂದಂತ ಅಲರ್ಟಗ ಮೆಸೇಜ್ ಎಂದು ಹೇಳಿದ್ದಾರೆ. ಬಳಿಕ ಇರಲಿ ಇರಲಿ ಬಿಡಿ ನಮ್ಮನ್ನು, ನಿಮ್ಮನ್ನು ಅಲರ್ಟ್ ಮಾಡುತ್ತಿದ್ದಾರೆ ಎಂದು ಮಾತು ಮುಂದುವರೆಸಿದ್ದಾರೆ ಡಿಸಿಎಂ.
ಇನ್ನು ಸುನಾಮಿ, ಪ್ರವಾಹ, ಭೂಕಂಪದಂತ ತುರ್ತು ಸಮಯದಲ್ಲಿ ಜನರನ್ನು ಎಚ್ಚರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದ್ದು, ಅದರ ಭಾಗವಾಗಿ ಇಂದು ಎಲ್ಲರ ಮೊಬೈಲ್ ಗಳಿಗೂ ನೋಟಿಫಿಕೇಷನ್ ಕಳುಹಿಸಲಾಗಿದೆ. ಮೊದಲಿಗೆ ಆ ಸಂದೇಶವನ್ನು ಇಂಗ್ಲಿಷ್ ನಲ್ಲಿ ಕಳುಹಿಸಿದ್ದು, ಬಳಿಕ ಕನ್ನಡದಲ್ಲಿಯೂ ಕಳುಹಿಸಿದ್ದಾರೆ.