ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 01 : ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಮಾಜವಾದ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಅಖೀಲೇಶ್ ಯಾದವ್‍ರವರ 52ನೇ ಹುಟ್ಟು ಹಬ್ಬವನ್ನು ಸಮಾಜವಾದ ಪಾರ್ಟಿಯ ಚಿತ್ರದುರ್ಗ ಘಟಕದ ವತಿಯಿಂದ ಆಚರಿಸಲಾಯಿತು.
ಸಮಾಜವಾದ ಪಾರ್ಟಿಯ ಚಿತ್ರದುರ್ಗ ಘಟಕದ ಅಧ್ಯಕ್ಷರಾದ ಲಕ್ಷ್ಮೀಕಾಂತ ಮಾತನಾಡಿ, ಮುಖ್ಯಮಂತ್ರಿ ಯಾಗಿ ಅಖಿಲೇಶ್ ಯಾದವ್ ಅವರು ರಾಜ್ಯ ಮತ್ತು ಸಮಾಜವಾದಿ ಪಕ್ಷದಲ್ಲಿ ಅನೇಕ ಸುಧಾರಣೆಗಳನ್ನು ಪ್ರಾರಂಭಿಸಿದ್ದಾರೆ, ಇದು ಎರಡನ್ನೂ ಹೊಸ ರೂಪಕ್ಕೆ ತಂದಿದೆ. ಅವರು ‘ಜನತಾ ದರ್ಬಾರ್’ ಅನ್ನು ಪರಿಚಯಿಸಿದರು, ಅಲ್ಲಿ ಯಾವುದೇ ನಾಗರಿಕರು ಬಂದು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಮಂಡಿಸ ಬಹುದು. ಸರ್ಕಾರಿ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಮತ್ತು ಅದನ್ನು ಕಾಗದರಹಿತ ಮತ್ತು ಪಾರದರ್ಶಕವಾಗಿಸಲು ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಜನರೊಂದಿಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಯುವ ಮುಖ್ಯಮಂತ್ರಿ ವಿವಿಧ ಅಪ್ಲಿಕೇಶನ್‍ಗಳು ಮತ್ತು ಆನ್‍ಲೈನ್ ಪೋರ್ಟಲ್‍ಗಳನ್ನು ಪ್ರಾರಂಭಿಸಿದರು. ಗ್ರಾಮೀಣ ಬಡವರು, ರೈತರು, ಕಾರ್ಮಿಕರು ಮತ್ತು ದೀನದಲಿತರ ಸರ್ವತೋಮುಖ ಅಭಿವೃದ್ಧಿಗಾಗಿ ಸಕ್ರಿಯವಾಗಿ ಮತ್ತು ನಿರಂತರವಾಗಿ ಹೋರಾಡುತ್ತಿದ್ದಾರೆ ಎಂದರು.
ಬಸವಣ್ಣರವರ ಆಶಯದಂತೆ ನಮ್ಮ ಪಾರ್ಟಿ ಕೆಲಸವನ್ನು ಮಾಡುತ್ತಿದೆ. ಪ್ರಜಾಪ್ರಭುತ್ವದ ಸಿದ್ದಾಂತ ಸಮಾನತೆ, ಮೇಲೆ ಕೋಮು ಶಕ್ತಿಯ ವಿರುದ್ದವಾಗಿ ಕೆಲಸವನ್ನು ಮಾಡಲಾಗುತ್ತದೆ. ಜನತೆಯ ಸೇವೆಯನ್ನು ಜನಾರ್ಧನನ ಸೇವೆ ಎಂದು ಮಾಡಲಾಗುತ್ತಿದೆ. ಮಾನವಿಯತೆ ಮತ್ತು ಮನುಷ್ಯತ್ವ ಅಗತ್ಯವಾಗಿದೆ. ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿವುದರ ಮೂಲಕ ಜನನಾಯಕರಾಗಿದಾರೆ. ಹಿಂದುಳಿದ ವರ್ಗದವರಿಗೆ ಆದತ್ಯೆಯನ್ನು ನೀಡುವುದರ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಹಿತಿ ಅನಂದಕುಮಾರ್ ಮಾತನಾಡಿ, ಜುಲೈ 1, 1973 ರಂದು ಸೈಫೈನಲ್ಲಿ ಶ್ರೀ ಮುಲಾಯಂ ಸಿಂಗ್ ಯಾದವ್ ಮತ್ತು ಶ್ರೀಮತಿ ಮಾಲತಿ ದೇವಿ ದಂಪತಿಗಳಿಗೆ ಜನಿಸಿದ ಅಖಿಲೇಶ್ ಯಾದವ್, ರಾಜಸ್ಥಾನದ ಧೋಲ್ಪುರ್ ಮಿಲಿಟರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಅವರು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸಿವಿಲ್ ಪರಿಸರ ಎಂಜಿನಿಯರಿಂಗ್‍ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದರು.
ಅಖಿಲೇಶ್ ಯಾದವ್ ಅವರು 2012 ರಿಂದ 2017 ರವರೆಗೆ ಉತ್ತರ ಪ್ರದೇಶದ 20 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಮಾರ್ಚ್ 15, 2012 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕೃತ ಜವಾಬ್ದಾರಿಗಳನ್ನು ವಹಿಸಿಕೊಂಡರು ಮತ್ತು 38 ನೇ ವಯಸ್ಸಿನಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ. ಅವರು 2000 ರಲ್ಲಿ ಕನೌಜ್‍ನಿಂದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು.
ನ್ಯಾಯವಾದಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಗುರುಮೂರ್ತಿ ಹಾಗೂ ಜಿಲ್ಲಾ ಸಮಾಜವಾದಿ ಪಾರ್ಟಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಬೂಬ್ ಭಾಷಾ ಮತ್ತು ಎಸ್ ಟಿ ಘಟಕದ ಜಿಲ್ಲಾಧ್ಯಕ್ಷ ಡಾಕ್ಟರ್ ಶಿವಣ್ಣ ಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಣ್ಣ, ಕಣಿವೆ ಮಾರಮ್ಮನ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಬಂಜರ ಸೇವಾ ಸಮಿತಿ ಅಧ್ಯಕ್ಷರಾದ ಗಿರೀಶ್ ನಾಯಕ್,ದಲಿತ ಮುಖಂಡರಾದ ಮಹಾಲಿಂಗಪ್ಪ ಕುಂಚಿಗನಾಳ,ರಾಜಣ್ಣ ರವಿ ಮುಖಂಡರು ಗಿರೀಶ್ ಇನ್ನು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

