ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಗೆ ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭೇಟಿ ನೀಡಿದ್ದರು. ಈ ವೇಳೆ ಪೊಲೀಸರು, ಅಖಿಲೇಶ್ ಯಾದವ್ ಅವರಿಗೆ ಚಹಾ ನೀಡಲು ಹೋಗಿದ್ದಾರೆ. ಆದರೆ ಆ ಚಹಾವನ್ನು ಅಖಿಲೇಶ್ ಯಾದವ್ ನಿರಾಕರಿಸಿದ್ದಾರೆ. ನೀವಿದರಲ್ಲಿ ವಿಷ ಬೆರೆಸಿದ್ದರೆ ಎಂಬ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.

ಅಖಿಲೇಶ್ ಯಾದವ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನಾವೂ ಹೊರಗಿನಿಂದ ಚಹಾ ತರಿಸಿಕೊಂಡು ಕುಡಿಯುತ್ತೇವೆ. ಬೇಕೆಂದರೆ ನಿಮ್ಮ ಬಳಿ ಕಪ್ ತೆಗೆದುಕೊಳ್ಳುತ್ತೇನೆ. ನೀವೂ ನನಗೆ ವಿಷ ಕೊಟ್ಟರೆ ಏನು ಮಾಡುವುದು..? ಎಂದು ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ್ದಾರೆ.

#WATCH समाजवादी पार्टी प्रमुख अखिलेश यादव ने पुलिस मुख्यालय में चाय पीने से इंकार किया।
उन्होंने कहा,"हम यहां की चाय नहीं पियेंगे। हम अपनी (चाय) लाएंगे, कप आपका ले लेंगे। हम नहीं पी सकते, ज़हर दे दोगे तो? हमें भरोसा नहीं। हम बाहर से मंगा लेंगे।"
(वीडियो सोर्स: समाजवादी पार्टी) pic.twitter.com/zwlyMp8Q82
— ANI_HindiNews (@AHindinews) January 8, 2023
ನನಗೆ ನಿಮ್ಮ ಬಗ್ಗೆ ನಂಬಿಕೆ ಇಲ್ಲ ಎಂದಿದ್ದಾರೆ. ಅವರ ಪಕ್ಷದ ಸಾಮಾಜಿಕ ಜಾಲತಾಣದ ನಿರ್ವಾಹಕ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಗ್ಗೆ ವಿಚಾರಿಸಲು ಹಜರ್ ಗಂಜ್ ಪೊಲೀಸ್ ಠಾಣೆಗೆ ಅಖಿಲೇಶ್ ಯಾದವ್ ಭೇಟಿ ನಿಡೀದ್ದರು. ಆ ವೇಳೆ ಈ ಘಟನೆ ನಡೆದಿದೆ.


