ನವದೆಹಲಿ: ಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮೇಲಿನ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಿನ್ನೆಯ ಗುಂಡಿನ ದಾಳಿಯ ನಂತರ ಅವರ ಸುರಕ್ಷತೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.
ಪರಿಶೀಲನೆ ನಂತರ .. ಸಿಆರ್ ಎಫ್ ಎಫ್ ಜೊತೆ ಝಡ್ ಕೆಟಗರಿ ಭದ್ರತೆ ನೀಡಲು ನಿರ್ಧರಿಸಲಾಯಿತು. ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಭದ್ರತೆಯನ್ನು ಜಾರಿಗೊಳಿಸಲು ನಿರ್ದೇಶನಗಳನ್ನು ನೀಡಿದೆ. ಏತನ್ಮಧ್ಯೆ, ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿದಂತೆ ಯುಪಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಘಟನೆಯ ತನಿಖೆಗೆ ಆದೇಶಿಸುವಂತೆ ಓವೈಸಿ ಇಸಿಗೆ ಮನವಿ ಮಾಡಿದ್ದಾರೆ.
ಝಡ್ ಕೆಟಗರಿ ಭದ್ರತೆಯಲ್ಲಿ ನಾಲ್ಕರಿಂದ ಆರು ಮಂದಿ ಎನ್ ಎಸ್ ಜಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 22 ಸಿಬ್ಬಂದಿ ಇದ್ದಾರೆ. ಇದು ದೆಹಲಿ ಪೊಲೀಸ್ ಅಥವಾ ITBP ಅಥವಾ CRPF ಸಿಬ್ಬಂದಿಯೊಂದಿಗೆ ಬೆಂಗಾವಲು ಕಾರನ್ನು ಸಹಾ ಒಳಗೊಂಡಿರುತ್ತದೆ.