ಸುದ್ದಿಒನ್, ಹಿರಿಯೂರು, ಮಾರ್ಚ್. 27 : ಅಕ್ರಮ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ
ಅವಿನಾಶ್ ಮತ್ತು ಸರೋಜಾಬಾಯಿ ಕಲ್ಯಾಣ ಮಂಟಪದ ಹಿಂಭಾಗ ಡಿಸಿಸಿ ಬ್ಯಾಂಕ್ ಲೇಔಟ್ ನ ಬಿ ಬಿ ತಿಪ್ಪೇಸ್ವಾಮಿ
ಎಂದು ಗುರುತಿಸಲಾಗಿದ್ದು ಇವರಿಂದ ಮೂರು ಸಾವಿರ ನಗದು ಹಣ ಮತ್ತು ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಐಮಂಗಲ ವೃತ್ತ ನಿರೀಕ್ಷಕರಾದ ಎನ್ ಗುಡ್ಡಪ್ಪ. ಐಮಂಗಲ ಠಾಣೆ ಪಿಎಸ್ಐ ಶ್ರೀಮತಿ ಎಂ ಟಿ ದೀಪು, ಸಿಬ್ಬಂದಿ ರವಿ, ಶಿವಕುಮಾರ್, ಪ್ರವೀಣ್ ಕುಮಾರ್, ಕಾಂತರಾಜ್ ಹರ್ಷ ರವರು ಐಮಂಗಲ ಬಳಿಯ ಗುಯಿಲಾಳ್ ಟೋಲ್ ಪ್ಲಾಜದ ಬಳಿ ಇರುವ ಆಗಸ್ತ್ಯ ಹೋಟೆಲ್ ಮುಂಭಾಗ, ಪರವಾನಗಿ ಇಲ್ಲದ/ನಿಷೇಧಿತ
1) namobook247.com,
2) skybet365.in
3) lotus7book.com ವೆಬ್ ಸೈಟ್/ಅಪ್ಲಿಕೇಶನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಕೊಂಡು ಹಾಗೂ ಸಾರ್ವಜನಿಕರಿಂದಲೂ ಸಹ ಹಣ ಕಟ್ಟಿಸಿಕೊಂಡು ಕಾನೂನು ಬಾಹೀರವಾದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

