ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ಚಿತ್ರದುರ್ಗ ಸೇರಿದಂತೆ ಬಳ್ಳಾರಿ, ವಿಜಯನಗರ, ದಾವಣಗೆರೆ ಗದಗ, ಕೊಪ್ಪಳ, ಶಿವಮೊಗ್ಗ, ಬೆಂಗಳೂರು ನಗರ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗಳ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರಾಜ್ಯ ಕಳ್ಳನನ್ನು ಐಮಂಗಲ ವೃತ್ತ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಹನುಮಂತ (26 ವರ್ಷ)
ಬಂಧಿತ ಆರೋಪಿ. ಆತನಿಂದ ಸುಮಾರು 26,98,000 ರೂ ಬೆಲೆಯ 351 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಈ ಕುರಿತು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಂತೆ
ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮತ್ತು ಪೊಲೀಸ್ ಉಪಾಧೀಕ್ಷಕರು, ಹಿರಿಯೂರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತರನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ರಚಿಸಿರುತ್ತಾರೆ.

ಫೆಬ್ರವರಿ 13 ರಂದು ಐಮಂಗಲ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ಹನುಮಂತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ, ಹಿರಿಯೂರು ನಗರ ಠಾಣೆ, ಚಿತ್ರದುರ್ಗ ನಗರದ ಬಡಾವಣೆ ಠಾಣೆಯ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣೆಯ ಮನೆಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಕಂಡು ಬಂದಿರುತ್ತದೆ.
ಅರೋಪಿಯನ್ನು ಪತ್ತೆ ಮಾಡಿದ ಸಿಪಿಐ ಗುಡ್ಡಪ್ಪ ಎನ್, ಪಿಎಸ್ಐ ಮಹೇಶ್ ಗೌಡ, ಎಎಸ್ಐ ರಾಮಯ್ಯ ಮತ್ತು ಸಿಬ್ಬಂದಿಯವರಾದ ದೇವೇಂದ್ರಪ್ಪ, ನಿಂಗರಾಜ, ಸಂಗಮೇಶ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ಪ್ರವೀಣ್ ಕುಮಾರ್ ಎನ್ ಜೆ, ಹರ್ಷ, ದಿಲೀಪ್ ಕುಮಾರ್ ಎಂ, ಚಿದಾನಂದ, ಪಿ.ಕೆ.ನಾಗರಾಜ್, ವೈ.ಕೆ.ತಿಪ್ಪೇಸ್ವಾಮಿ, ರವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿರುತ್ತಾರೆ.




