ನವದೆಹಲಿ: ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಸ್ಪರ್ಧೆಗೆ ಈಗಾಗಲೇ ಹಲವರ ಕೇಳಿ ಬಂದಿತ್ತು. ಬಳಿಕ ಇದೀಗ ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಸ್ಪರ್ಧೆ ಖಚಿತವಾಗಿದೆ. ಹೈಕಮಾಂಡ್ ಗೆ ಮಲ್ಲಿಕಾರ್ಜುನ ಖರ್ಗೆ ಕಡೆಗೆ ಒಲವು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ವಿಚಾರವನ್ನು ಚರ್ಚಿಸುವುದಕ್ಕೆ ಸೋನಿಯಾ ಗಾಂಧಿ ಮಡಿಕೇರಿಗೆ ಆಗಮಿಸುತ್ತಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಕಾರ್ಯಕ್ರಮ ನಡೆಯುತ್ತಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಯಾತ್ರೆ ಸಾಗಲಿದೆ. ಈ ಯಾತ್ರೆ ಸದ್ಯ ಕರ್ನಾಟಕದಲ್ಲಿ ಇದೆ. ಇಂದು ಮೈಸೂರಿನಿಂದ ಮಡಿಕೇರಿ ಕಡೆಗೆ ಯಾತ್ರೆ ಸಾಗುತ್ತಿದ್ದು, ರಾಹುಲ್ ಗಾಂಧಿ ಬಳಿ ಚರ್ಚಿಸುವುದಕ್ಕೆ ಸೋನಿಯಾ ಗಾಂಧಿ ಮಡಿಕೇರಿಗೆ ಬರಲಿದ್ದಾರೆ. ಮಡಿಕೇರಿಯಲ್ಲಿ ಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆಯಾಗಿದ್ದಾರೆ.
ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಬರಲಿದ್ದು, ಇಲ್ಲಿಂದ ಸಂಜೆ ವೇಳೆಗೆ ಸೋನಿಯಾ ಗಾಂಧಿ ಮಡಿಕೇರಿ ತಲುಪಲಿದ್ದಾರೆ. ಮಗನ ಬಳಿ ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ಕೂತು ಚರ್ಚೆ ನಡೆಸಲಿದ್ದಾರೆ.