ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಏಐಸಿಸಿ ಅಧ್ಯಕ್ಷರ ಮಲ್ಲಿಕಾರ್ಜನ ಖರ್ಗೆಯವರ 84 ನೇ ಹುಟ್ಟು ಹಬ್ಬ ಆಚರಣೆ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜು. 21 : ಏಐಸಿಸಿಯ ಅಧ್ಯಕ್ಷರು ರಾಜ್ಯ ಸಭಾದ ವಿರೋಧ ಪಕ್ಷದ ನಾಯಕರು ಹಿರಯ ಮುತ್ಸದಿ ಮಲ್ಲಿಕಾರ್ಜನ ಖರ್ಗೆಯವರ 84 ನೇ ಹುಟ್ಟು ಹಬ್ಬವನ್ನು ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪಕ್ಷ ಹಾಗೂ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ಮಾತನಾಡಿ, ಕರ್ನಾಟಕ ರಾಜ್ಯ ಇಬ್ಬರನ್ನು ಏಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಹಾಗೂ ಇಂದಿನ ಮಲ್ಲಿಕಾರ್ಜನ ಖರ್ಗೆಯವರಾಗಿದ್ದಾರೆ. ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಉನ್ನತವಾದ ಸ್ಥಾನವನ್ನು ಅಲಕಂರಿಸುತ್ತಾರೆ ಎಂಬುದಕ್ಕೆ ಖರ್ಗೆಯವರು ಸಾಕ್ಷಿಯಾಗಿದ್ದಾರೆ. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಬ್ಲಾಕ್, 500ಕ್ಕೂ ಹೆಚ್ಚು ಜಿಲ್ಲಾಧ್ಯಕ್ಷರು, 30ಕ್ಕೂ ಹೆಚ್ಚು ರಾಜ್ಯಾಧ್ಯಕ್ಷರು ಇದ್ದಾರೆ ಇತಂಹವರಲ್ಲಿ ಕೆಲವರಿಗೆ ಮಾತ್ರ ರಾಷ್ಟ್ರದ ಉನ್ನತ ಹುದ್ದೆ ದೂರಕಲು ಸಾಧ್ಯವಿದೆ ಇತಂಹದರಲ್ಲಿ ನಮ್ಮ ಖರ್ಗೆಯವರಿಗೆ ಅದೃಷ್ಟ ಒಲಿದಿದೆ ಎಂದರು.

ಮಲ್ಲಿಕಾರ್ಜನ ಖರ್ಗೆಯವರ ಬೆಳವಣಿಗೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಪಾತ್ರ ಹೆಚ್ಚಾಗಿದೆ. ಜಾಫರ್ ಷರೀಫ್ ನಂತರ ಜಿಲ್ಲೆಯಲ್ಲಿ ಅವರು ಹೆಸರನ್ನು ಪಡೆದಿದ್ದಾರೆ. ಖರ್ಗೆಯವರು ಮುಖ್ಯಮಂತ್ರಿಗಳಾಗಲಿಲ್ಲ ಆದರೆ ದೇಸದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಏಐಸಿಸಿ ಅಧ್ಯಕ್ಷರಾಗುವುದರ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಲಾವಾರು ರಾಜ್ಯಗಳಲ್ಲಿ ಅಧಿಕಾರಕ್ಕೆ ತರುವಂತ ಕಾರ್ಯವನ್ನು ಮಾಡಿದ್ದಾರೆ. ಇದ್ದಲ್ಲದೆ ಲೋಕಸಭೆಯಲ್ಲಿ ಕಡಿಮೆ ಸ್ಥಾನದಲ್ಲಿದ್ದ ಕಾಂಗ್ರೆಸ್‍ನ್ನು ಹೆಚ್ಚು ಸ್ಥಾನಗಳಿಸುವಂತೆ ಮಾಡಿದ್ದಾರೆ.  ಇವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶವನ್ನು ಒಟ್ಟಾಗಿ ಖರ್ಗೆಯವರ ಸಾರಥ್ಯದಲ್ಲಿ ಮಾಡುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಗಳಿಸಿದ್ದರೆ ಮಲ್ಲಿಕಾರ್ಜನ ಖರ್ಗೆಯವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡುವ ಮಾತುಕಥೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಅಗ ಮಲ್ಲಿಕಾರ್ಜನ ಖರ್ಗೆಯವರನ್ನು ಪ್ರಧಾನ ಮಂತ್ರಿಯನ್ನಾಗಿ ನಮ್ಮ ಹೈಕಮಾಂಡ್ ಮಾಡಲಿದೆ ಎಂದು ತಾಜ್ ಪೀರ್ ಭವಿಷ್ಯ ನುಡಿದರು.

ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಖರ್ಗೆಯವರು ಕಾಂಗ್ರೆಸ್ ಪಕ್ಷಕ್ಕೆ ತೋರಿಸಿದ ನಿಷ್ಠಯ ಫಲವಾಗಿ ಇಂದು ಅವರು ಪಕ್ಷದ ಉನ್ನತವಾದ ಸ್ಥಾನವನ್ನು ಏರಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಗಳಾಗಿ ಕೆಲಸವನ್ನು ಮಾಡಿದ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಈ ಸಮಯದಲ್ಲಿ ರಾಜ್ಯಕ್ಕೆ ಹಲವಾರು ಉಪಯುಕ್ತವಾದ ಯೋಜನೆಗಳು ಜಾರಿಯಾಗಿವೆ. ಕಲ್ಬುರ್ಗಿಯಲ್ಲಿ ಏನ ಅಭೀವೃದ್ದಿಯಾಗಿಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆ ಹೋಡಿಯುತ್ತಿದ್ದಾರೆ ಆದರೆ ಖರ್ಗೆಯವರು ಅಲ್ಲಿ ತಳ ಮಟ್ಟದಿಂದ ಅಭೀವೃದ್ದಿ ಕಾರ್ಯವನ್ನು ಮಾಡಿದ್ದಾರೆ. ಮುಂದಿನ ದಿನದಲ್ಲಿ ಅವರು ದಲಿತ ಪ್ರಧಾನ ಮಂತ್ರಿಗಳಾಗುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮೈಲಾರಪ್ಪ, ಲಕ್ಷ್ಮೀಕಾಂತ, ಅಲ್ಲಾಭಕ್ಷಿ, ಗ್ಯಾರೆಂಟಿ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್ ಖರ್ಗೆಯವರ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರಾಭೀವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಕಿಸಾನ್ ಘಟಕದ ಶಿವಲಿಂಗಪ್ಪ, ವೆಂಕಟೇಶ್, ಮುದಸಿರ್, ಲೋಕೇಶ್, ಓಬಿಸಿ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಪೈಲಟ್, ಖಾಸಿಂಆಲಿ, ಚಾಂದ್ ಪೀರ್, ಮಧುಗೌಡ, ಅಬ್ದುಲ್ ಷಾ, ಓಬಣ್ಣ, ಅಲ್ಲಾಭಕ್ಷಿ, ಮಂಜುನಾಥ್ ಗುಪ್ತ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks