2008ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಎಲ್ಲರಿಗೂ ನೆನಪಿದ್ದೆ ಇದೆ. ಇದೀಗ ಆ ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 38 ಜನರಿಗೆ ಮರಣ ದಂಡನೆ ವಿಧಿಸಿದೆ. 11 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಮೊದಲ ಬಾರಿಗೆ ಹೀಗೆ 38 ಜನರಿಗೆ ಮರಣ ದಂಡನೆ ವಿಧಿಸಿರುವುದು.
ಅಹಮದಾಬಾದ್ ವಿಶೆಷ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದೆ. 2008ರ ಸರಣಿ ಸ್ಪೋಟದಲ್ಲಿ 56 ಜನ ಮೃತಪಟ್ಟಿದ್ದರು. 200 ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಫೆಬ್ರವರಿ 2022 ರಲ್ಲಿ ಆರೋಪಿಗಳನ್ನು ದೂಷಿಗಳೆಂದು ಘೋಷಿಸಿತ್ತು.
ಅಂದು 70 ನಿಮಿಷಗಳ ಅವಧಿಯಲ್ಲಿ 20 ಬಾಂಬ್ ಗಳು ಸ್ಪೋಟಗೊಂಡಿತ್ತು. ಬಾಂಬ್ ಸ್ಪೋಟದ ನಂತರ 77 ಆರೋಪಿಗಳ ಪೈಕಿ 28 ಆರೋಪಿಗಳನ್ನು ಗುಜರಾತ್ ನ ವಿಶರಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಉಳಿದ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಿದೆ.