ಚಿತ್ರದುರ್ಗ, (ಏ.18) : ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ. ಕೃಷಿ ವಿವಿಗಳಲ್ಲಿ ಬಿ.ಎಸ್ಸಿ. ಪ್ರವೇಶಾತಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ರೈತ ಮಕ್ಕಳಿಗಾಗಿ ವಿಧ್ಯಾನಿಧಿ ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹೊಳಲ್ಕೆರೆ ಪಟ್ಟಣದಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
2 ಸಾವಿರದಿಂದ 11 ಸಾವಿರದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಪ್ರಸಕ್ತವರ್ಷ 7 ಲಕ್ಷ ಮಕ್ಕಳು ಯೋಜನೆ ಲಾಭ ಪಡೆದಿದ್ದಾರೆ. ರಾಜ್ಯದ ರೈತರಿಗೆ ಪಿ.ಎಂ.ಕಿಸಾನ್ ಸಮ್ಮಾನ್ ಯೋಜಯಡಿ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಕೃಷಿ ಯಂತ್ರೋಪಕರಣಗಳಿಗೆ ಶೇ.90% ರಷ್ಟು ಸಬ್ಸಿಡಿ ನೀಡಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಯಂತ್ರೋಪಕರಣಗಳಿಗೆ ಬಳಸುವ ವಾರ್ಷಿಕ ಡೀಸೆಲ್‌ಗೆ 1250 ರೂಪಾಯಿ ಸಹಾಯಧನ ನೀಡಲಾಗುದು. ಈ ಯೋಜನೆಯನ್ನು ಜಾರಿಗೆಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಹೊಳಲ್ಕೆರೆ ತಾಲೂಕಿಗೆ ಜಲಾಯನ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರಸಕ್ತ ವರ್ಷ 14 ಕೋಟಿ ಅನುದಾನ ನೀಡಲಾಗಿದೆ. ಕೃಷಿಕರ ಮನಸ್ಸು ನಿಷ್ಕಕಲ್ಮಷವಾದುದು. ದೇಶಕ್ಕೆ ಅನ್ನ ನೀಡುವ ತಾಕತ್ತು ಕೃಷಿಕರಿಗಿದೆ ಎಂದರು.