ಹುಣಸೆಕಟ್ಟೆ ಗ್ರಾಮಕ್ಕೆ ಕೃಷಿ ವಿಜ್ಞಾನಿಗಳು ಭೇಟಿ, ಪರಿಶೀಲನೆ : ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗ ಬಾದೆಗಳಿಗೆ ನಿಯಂತ್ರಣ ಕ್ರಮ

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ(ಜುಲೈ.19) : ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗ ಬಾದೆಗಳು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಬಬ್ಬೂರು ಕೃಷಿ ವಿಜ್ಞಾನ  ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಓಂಕಾರಪ್ಪ, ಡಾ.ಎಲ್.ಹನುಮಂತರಾಯ, ಕೀಟ ತಜ್ಞರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮದ ರೈತರ ಸೇವಂತಿಗೆ ತಾಕುಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಸೇವಂತಿಗೆ ಬೆಳೆಯಲ್ಲಿ ಸೊರಗು ರೋಗ ಮತ್ತು ಥ್ರಿಪ್ಸ್ ಕೀಟದ ಬಾಧೆ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಬಾದೆಗಳಿಗೆ ನಿಯಂತ್ರಣ ಕ್ರಮಗಳನ್ನು ತಿಳಿಸಿದ್ದಾರೆ.

ಥ್ರಿಪ್ಸ್ ಕೀಟ ನಿಯಂತ್ರಣಕ್ಕೆ ಹತೋಟಿ ಕ್ರಮಗಳು: ಜೈವಿಕ ನಿಯಂತ್ರಣ ಕ್ರಮ-ಕೀಟಕ್ಕೆ ಉದ್ದನೆಯ ಬೆಳೆಯಾದ ಜೋಳ ಮತ್ತು ಸಜ್ಜೆ ಬೆಳೆಗಳನ್ನು ಬದುವಿನಲ್ಲಿ ಮತ್ತು 6 ಸಾಲಿನ ನಂತರ ಹಾಕಬೇಕು. ಹಳದಿ ಅಥವಾ ನೀಲಿ ಅಂಟು ಬಲೆಯನ್ನು ಉಪಯೋಗಿಸಬೇಕು. 1 ಎಕರೆಗೆ 40 ಅಂಟು ಬಲೆಗಳನ್ನು ಗಿಡದ ಎತ್ತರಕ್ಕಿಂತ 6 ಇಂಚು ಎತ್ತರದಲ್ಲಿ ಕಟ್ಟಬೇಕು. ಜೈವಿಕ ಹತೋಟಿ ಕ್ರಮಗಳಲ್ಲಿ ಒಂದಾದ ಲೇಕನೆಸಿಲಿಯಂ ಲೇಕನೆಯ 5 ಗ್ರಾ 1 ಲೀಟರ್ ನೀರಿಗೆ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ ಕ್ರಮಗಳಾದ ರಾಸಾಯನಿಕ ಕೀಟ ನಾಶಕಗಳಾದ ಇಮಿಡಾ ಕ್ಲೋ ಫ್ರೀಡ್ 0.5 ml   ಒಂದು ಲಿಟರ್ ನೀರಿಗೆ ಸಿಂಪಡಿಸಬೇಕು ಅಥವಾ ಅಸಿಟೋಮೋ ಪ್ರಿಡ್ 0.5 ml   ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು ಅಥವಾ ತೈಯೋಮಿತೋಗಾನ್ 0.4 ಗ್ರಾಂ ಒಂದು ಲೀಟರ್ ನೀರಿಗೆ ಸಿಂಪರಿಸಬೇಕು. ಅಥವಾ ಫೀಟ್ರೋನಿಲ್ 1 ml  ಒಂದು ಲೀಟರ್ ನೀರಿಗೆ ಸಿಂಪಡಿಸಬೇಕು. ಕೀಟ ನಾಶಕಗಳನ್ನು ಸಿಂಪಡಿಸುವಾಗ ಮೇಲ್ದಂಡ ಕೀಟನಾಶಕಗಳು ಪುನರಾವರ್ತನೆಯಾಗಬಾರದು ಹಾಗೂ ಒಂದೇ ಬೆಳೆಯನ್ನು ಸತತವಾಗಿ ಒಂದೇ ಜಾಗದಲ್ಲಿ ಬೆಳೆಯಬಾರದು, ಸೊರಗು ರೋಗದ ನಿಯಂತ್ರಣ ಕ್ರಮಗಳು: ರಾಸಾಯನಿಕ ನಿಯಂತ್ರಣ ಕ್ರಮಗಳು-ರೋಗಕ್ಕೆ ಪೆÇ್ರೀಪಿಕೋನಜಾಲ್ 2.00 ml  ಒಂದು ಲೀಟರ್ ನೀರಿಗೆ ಬೆರಸಿ ಸೇವಂತಿಗೆ ಗಿಡದ ಬುಡಕ್ಕೆ ನೆನೆಯುವ ಹಾಗೆ ಹಾಕಬೇಕು, ಉಪಚಾರ ಮಾಡಿದ ನಂತರ 3 ದಿನಗಳು ನೀರು ಹಾಯಿಸಬಾರದು ಮತ್ತು ನೀರನ್ನು ಮಿತವಾಗಿ ಬಳಸಿ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು.

ಜೈವಿಕ ನಿಯಂತ್ರಣ ಕ್ರಮಗಳು: ನಾಟಿ ಮಾಡುವ ಸಮಯದಲ್ಲಿ ಬೇವಿನ ಹಿಂಡಿ, 250 ಕೆ.ಜಿ 1 ಎಕರೆಗೆ, ಟ್ರೋಕೋರ್ಡಮ್ 1 ಕೆ.ಜಿ ಯನ್ನು 100 ಕೆ.ಜಿ ಕೋಟ್ಟಿಗೆ ಗೊಬ್ಬರಕ್ಕೆ ಬೆರಸಿ 20 ರಿಂದ 30 ದಿನಗಳ ಕಾಲ ನೆರಳಿನಲ್ಲಿ ಬಿಟ್ಟು ನಂತರ ಹದವಾಗಿ ಇರುವ ಜಮೀನಿಗೆ ಬಳಸಬೇಕು ಮತ್ತು ಜೀವಾಮೃತವನ್ನು ಬಳಸಿದರೆ, ಮುಂದೆ ಬರುವ ಸೊರಗು ರೋಗವನ್ನು ಹತೋಟಿ ಮಾಡಬಹುದು ಎಂದು ರೈತರಿಗೆ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *