ಬೆಂಗಳೂರು: ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಸಿ ಸುಮಾರು 241 ದಿನಗಳಿಂದಲೂ ಉಪವಾಸ ಮಾಡುತ್ತಿದ್ದ ವಾಲ್ಮೀಕಿ ಸ್ವಾಮೀಜಿ ಇಂದು ತಮ್ಮ ಪ್ರತಿಭಟನೆಯನ್ನು ಅಂತ್ಯ ಮಾಡಿದ್ದಾರೆ. ಸರ್ಕಾರದಿಂದ ಮೀಸಲಾತಿ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. 241 ದಿನಗಳ ಅವರ ಪ್ರತಿಭಟನೆಗೆ ಸಿಕ್ಕಂತ ಯಶಸ್ಸು ಇದಾಗಿದೆ.
ನಿನ್ನೆ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚೆಯಾಗಿತ್ತು. ಜೊತೆಗೆ ಒಪ್ಪಿಗೆಯೂ ಸಿಕ್ಕಿತ್ತು. ಇಂದು ಸಂಪುಟ ಸಭೆಯಲ್ಲೂ ಇದಕ್ಕೆ ಅನುಮತಿ ಸಿಕ್ಕಿದ್ದು, ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದ ಪರತಿಭಟನೆಯೂ ಸ್ಥಗಿತಗೊಂಡಿದೆ. ಬಳಿಕ ವಾಲ್ಮೀಕಿ ಸಮುದಾಯದ ಮುಖಂಡರು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸಿಹಿ ತಿನ್ನಿಸಿ ಆನಂದಿಸಿದ್ದಾರೆ.