2026-27ನೇ ಸಾಲಿನ ‘ಅಗ್ನಿವೀರ್’ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸುಮಾರು 25,000ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಅಗ್ನಿಪಥ್ ಯೋಜನೆಯಡಿ ಈ ನೇಮಕಾತಿಯು ನಡೆಯಲಿದ್ದು ದೇಶದ ರಕ್ಷಣೆಯಲ್ಲಿ ಯುವಜನರಿಗೆ ಅವಕಾಶ ಕೊಡುವುದು ಉದ್ದೇಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕು, ಆಕರ್ಷಕ ಸಂಬಳದ ಜೊತೆಗೆ ಸೇವೆಯ ಕೊನೆಯಲ್ಲಿ ದೊಡ್ಡ ಮೊತ್ತದ ಸೇವಾ ನಿಧಿ ಪ್ಯಾಕೇಜ್ ಪಡೆಯಲಿದ್ದಾರೆ.
ಅಗ್ನಿವೀರ್ ಆಗಲು ಬಯಸುವ ಅಭ್ಯರ್ಥಿಗಳ ವಯಸ್ಸು 17.5 ವರ್ಷದಿಂದ 21 ವರ್ಷದೊಳಗೆ ಇರಬೇಕು.
ಜನರಲ್ ಡ್ಯೂಟಿ: 10ನೇ ತರಗತಿಯಲ್ಲಿ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಟೆಕ್ನಿಕಲ್: ಪಿಯುಸಿ (ವಿಜ್ಞಾನ ವಿಭಾಗ) ಅಥವಾ ತತ್ಸಮಾನ ಕೋರ್ಸ್ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.
ಟ್ರೇಡ್ಸ್ಮನ್: 8ನೇ ಅಥವಾ 10ನೇ ತರಗತಿ ಪಾಸಾಗಿದ್ದರೆ ಸಾಕು.
ಕ್ಲರ್ಕ್: ಪಿಯುಸಿಯಲ್ಲಿ ಶೇ.60 ಅಂಕಗಳೊಂದಿಗೆ (ಕಲಾ, ವಾಣಿಜ್ಯ ಅಥವಾ ವಿಜ್ಞಾನ) ಉತ್ತೀರ್ಣರಾಗಿರಬೇಕು.
ಮೊದಲನೇ ವರ್ಷ: ತಿಂಗಳಿಗೆ ₹30,000 (ಕೈಗೆ ಸಿಗುವುದು ₹21,000 + ₹9,000 ಕಾರ್ಪಸ್ ಫಂಡ್ಗೆ ಜಮೆ).
ಎರಡನೇ ವರ್ಷ: ತಿಂಗಳಿಗೆ ₹33,000 (ಕೈಗೆ ₹23,100).
ಮೂರನೇ ವರ್ಷ: ತಿಂಗಳಿಗೆ ₹36,500 (ಕೈಗೆ ₹25,550).
ನಾಲ್ಕನೇ ವರ್ಷ: ತಿಂಗಳಿಗೆ ₹40,000 (ಕೈಗೆ ₹28,000).
ನಾಲ್ಕು ವರ್ಷಗಳ ಸೇವೆ ಮುಗಿಸಿದ ನಂತರ, ಸೇವಾ ನಿಧಿ (Seva Nidhi) ಪ್ಯಾಕೇಜ್ ಅಡಿಯಲ್ಲಿ ಬಡ್ಡಿ ಸೇರಿ ಸುಮಾರು ₹11.71 ಲಕ್ಷ ಮೊತ್ತವನ್ನು ಒಂದೇ ಬಾರಿಗೆ ನೀಡಲಾಗುತ್ತದೆ. ಈ ಹಣಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಇದಲ್ಲದೆ, ಶೇ.25 ರಷ್ಟು ಅಗ್ನಿವೀರರನ್ನು ಕಾಯಂ ಸೈನಿಕರನ್ನಾಗಿ (Regular Cadre) ನೇಮಿಸಿಕೊಳ್ಳಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 1, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


