ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ, ಬಹಳ ವರ್ಷಗಳ ಕಾಲ ಪ್ರಸಾರಗೊಂಡ ಧಾರಾವಾಹಿ ಅಗ್ನಿಸಾಕ್ಷಿ. ಈ ಧಾರಾವಾಹಿಯಿಂದಾನೇ ವೈಷ್ಣವಿ ಗೌಡ, ಸನ್ನಿಧಿಯಾಗಿ ಖ್ಯಾತಿ ಪಡೆದಿದ್ದರು. ಇದೀಗ ಹೊಸ ಜೀವನಕ್ಕೆ ಕಾಲಿಡುವುದಕ್ಕೆ ಅಣಿಯಾಗಿದ್ದಾರೆ.
ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಮನೆ ಮತ್ತು ಸಂಬಂಧಿಕರು ಮಾತ್ರ ಈ ಎಂಗೇಜ್ಮೆಂಟ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವೈರಲ್ ಆಗಿರುವ ಫೋಟೋದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಕಾಣಿಸಿಕೊಂಡಿದ್ದಾರೆ.
ವೈಷ್ಣವಿ ಗೌಡ ಕಳೆದ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಮನೆ ಸದಸ್ಯರ ಬಳಿ ಮಾತನಾಡುವಾಗ ನನಗೂ ಮದುವೆಯಾಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದರು. ಆ ವಿಚಾರ ಬಾರೀ ವೈರಲ್ ಕೂಡ ಆಗಿತ್ತು. ಇದೀಗ ಆ ಆಸೆ ನೆರವೇರಿದೆ. ವೈಷ್ಣವಿ ಗೌಡ ಮದುವೆಯಾಗುತ್ತಿರುವ ಹುಡುಗ ಬೆಂಗಳೂರಿನಲ್ಲಿ ಬಿಸಿನೆಸ್ ಮ್ಯಾನ್ ಎನ್ನಲಾಗುತ್ತಿದೆ. ಆದ್ರೆ ಇನ್ನಷ್ಟು ಮಾಹಿತಿ ಹೊರಬೀಳಬೇಕಾಗಿದೆ.