ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಯ ಮನಸ್ತಾಪ ಇದ್ದಿದ್ದೆ. ಯಾವುದೇ ಪಕ್ಷ ಬಂದರೂ ಸಹ ಆ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳು, ಸಚಿವಕಾಂಕ್ಷಿಗಳು ಇದ್ದೆ ಇರುತ್ತಾರೆ. ಕಾಂಗ್ರೆಸ್ ನಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಯ ಯುದ್ಧ ನಡೆಯುತ್ತಲೆ ಇರುತ್ತದೆ. ಈ ವಿಚಾರಕ್ಕೆ ಈಗ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಅವಕಾಶ ನೀಡಿವೆ.
ನಿನ್ನೆಯಷ್ಟೇ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಜೆಡಿಎಸ್ ಗೆ ಬಂದರೆ ನಮ್ಮ ಎಲ್ಲರ ಬೆಂಬಲ ಇದ್ದೆ ಇರುತ್ತದೆ ಎಂದಿದ್ದರು. ಈಗ ಬಿಜೆಪಿಯಿಂದ ಸಿಟಿ ರವಿ ಅವರು ಆಫರ್ ನೀಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ಬಿಟ್ಟು ಬಂದರೆ ಬಿಜೆಪಿ ಯೋಚನೆ ಮಾಡುತ್ತದೆ ಎಂದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಮ್ಮದು ಅಪ್ಪಟ ದೇಶ ಭಕ್ತರ ಪಾರ್ಟಿ. ಅವರು ಹೇಳುವ ಹಾಗಿಲ್ಲ, ನಾವೂ ಕೊಡುವ ಹಾಗಿಲ್ಲ. ಬಿಜೆಪಿ ಕಾಂಗ್ರೆಸ್ ಎಣ್ಣೆ ಸೀಗೆಕಾಯಿ ಇದ್ದಂಗೆ. ಡಿಕೆ ಶಿವಕುಮಾರ್ ಕಾಂಗ್ರೆಸ್ ಬಿಟ್ಟು ಬಂದ್ರೆ ಬಿಜೆಪಿ ಯೋಚನೆ ಮಾಡುತ್ತೆ ಎಂದಿದ್ದಾರೆ.
ವಿಧಾನಸಭಾ ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷದಲ್ಲೂ ಈ ರೀತಿಯ ಮನಸ್ತಾಪಗಳು ಮೂಡಿದ್ದವು. ಗೌಡ್ರ ಕುಟುಂಬದಲ್ಲಿಯೇ ಮನಸ್ತಾಪ ಎದ್ದಿತ್ತು. ಭವಾನಿ ರೇವಣ್ಣ ಅವರು ಟಿಕೆಟ್ ಗಾಗಿ ಹಠ ಹಿಡಿದಿದ್ದರು. ಆಗ ಕೂಡ ಸಿಟಿ ರವಿ ಅವರು, ಬಿಜೆಪಿಗೆ ಬರಲಿ ಎಂದೇ ಆಹ್ವಾನ ನೀಡಿದ್ದರು. ಬಿಜೆಪಿಗೆ ಬಂದರೆ ಆ ಕ್ಷೇತ್ರದ ಟಿಕೆಟ್ ನೀಡುವುದಾಗಿಯೂ ಬಿಜೆಪಿ ಹೇಳಿತ್ತು. ಇದೀಗ ಡಿಕೆ ಶಿವಕುಮಾರ್ ಅವರನ್ನು ಕರೆಯುತ್ತಿದ್ದಾರೆ.