ಮೊಟ್ಟೆ ಕದ್ದು ಕಳ್ಳರು ಸಿದ್ದರಾಮಯ್ಯ ಮೇಲೆ ಎಸೆದಿದ್ದಾರೆ. ಸಿದ್ದರಾಮೋತ್ಸವ ನಂತರ ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ. ಆರ್ ಎಸ್ ಎಸ್ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯನ್ನು ಮನೆಗೆ ಕಳುಹಿಸಲು ಜನ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಬ್ರಿಟಿಷರ ಗುಂಡೇಟಿಗೆ ಹೆದರಿಲ್ಲ. ಇನ್ನು ನಿಮ್ಮಂತಹ ಮೊಟ್ಟೆ ಕಳ್ಳರಿಗೆ ಹೆದರುವುದಿಲ್ಲ. ಇದು ಬಿಜೆಪಿಯವರಿಗೆ ಕೊನೆಯ ಎಚ್ಚರಿಕೆ ಎಂದು ವಾರ್ನಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಕೊಡಗಿಗೆ ನೆರೆ ಹಾನಿ ಪ್ರದೇಶ ಭೇಟಿಗೆ ಹೋದಾಗ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಿ, ಅವರು ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ರೊಚ್ಚಿಗೆದ್ದಿದ್ದು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.