ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮೋದಿಯನ್ನು ಸೋಲಿಸಲೇಬೇಕೆಂದುಕೊಂಡು ವಿಪಕ್ಷಗಳು ಯೋಜನೆ ರೂಪಿಸುತ್ತಿವೆ. ಹೀಗಾಗಿಯೇ ವಿಪಕ್ಷಗಳೆಲ್ಲ ಬೆಂಗಳೂರಿನಲ್ಲಿ ಸಭೆ ಸೇರಿ, ಚರ್ಚೆ ನಡೆಸಿವೆ. ಇದಕ್ಕೆ ವಿಪಕ್ಷಗಳೆಲ್ಲಾ ಸೇರಿ ಇಂಡಿಯಾ ಎಂದು ಹೆಸರಿಟ್ಟಿವೆ.
ಇಂಡಿಯನ್ ನ್ಯಾಷನಲ್ ಡೆವೆಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್ ಅಂತಾ ಹೆಸರಿಟ್ಟಿದೆ. ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಬಿಜೆಪಿ ಕೂಡ ಪ್ಲ್ಯಾನ್ ಮಾಡಿದೆ. ನಿನ್ನೆ ಎನ್‌ಡಿಎ ಸಭೆ ನಡೆಸಿದ್ದು, 38 ರಾಜಕೀಯ ಪಕ್ಷಗಳ ಜೊತೆಯಲ್ಲಿ ಸಭೆ ನಡೆಸಿದೆ. ಅದಕ್ಕೆ ನ್ಯೂ ಇಂಡಿಯಾ ಎಂದು ಹೆಸರಿಡಲಾಗಿದೆ.
ಎನ್ ಅಂದ್ರೆ ನ್ಯೂ ಇಂಡಿಯಾ, ಡಿ ಅಂದ್ರೆ ಡೆವಲಪ್ಮೆಂಟ್, ಎ ಅಂದ್ರೆ ಆಸ್ಪಿರೇಷನ್ ಅಂತಾ ವಿಶ್ಲೇಶಿಸಿ ವಿಪಕ್ಷಗಳಿಗೆ ಕೌಂಟರ್ ಕೊಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಎನ್‌ಡಿಎ ಗೆಲುವು ಸಾಧಿಸಲಿದೆ ಅಂತಾ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.