ರಶ್ಮಿಕಾ ಬಿಟ್ಟು ಶ್ರೀಲೀಲಾಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆಯಂತೆ ತೆಲುಗು ಅಂಗಳದಲ್ಲಿ..!

ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಇಬ್ಬರು ಕನ್ನಡದ ನಟಿಯರೇ. ಸದ್ಯ ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ, ಶ್ರೀಲೀಲಾ ತೆಲುಗು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಶ್ರೀಲೀಲಾ ತೆಲುಗು ಇಂಡಸ್ಟ್ರಿಗೆ ಎಂಟ್ರಿಯಾಗಿದ್ದೆ ತಡ, ಬ್ಯಾಕ್ ಟು ಬ್ಯಾಕ್ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಸೇರಿದಂತೆ ಹಲವು ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ರವಿತೇಜ ಜೊತೆಗೆ ಒಂದು ಹಿಟ್ ನೀಡಿದ್ದು, ಈಗ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಇತ್ತಿಚೆಗಷ್ಟೇ ಶ್ರೀಲೀಲಾಗೆ ಸಂಬಂಧಿಸಿದಂತ ಸುದ್ದಿಯೊಂದು ವೈರಲ್ ಆಗಿತ್ತು. ಶ್ರೀಲೀಲಾ ಬೋಲ್ಡ್ ಪಾತ್ರ ಮಾಡು ಎಂದಿದ್ದಕ್ಕೆ, ಆ ಡೈರೆಕ್ಟರ್ ಜೊತೆಗಿನ ಸಿನಿಮಾವನ್ನೇ ಕೈಬಿಟ್ಟಿದ್ದರು ಎಂಬುದು. ಇದೀಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.

 

ರಶ್ಮಿಕಾ ಅವಕಾಶಗಳೆಲ್ಲಾ ಶ್ರೀಲೀಲಾ ಪಾಲಿಗೆ ಧಕ್ಕುತ್ತಿವೆ ಎನ್ನಲಾಗುತ್ತಿದೆ. ವೆಂಕಿ ಕುಮುಡುಲು ನಿರ್ದೇಶನದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ಆ ಸಿನಿಮಾಗೆ ನಿರ್ಮಾಪಕರೇ ನಟಿಯನ್ನು ಬದಲಾಯಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಹಿಂದಿಯಲ್ಲಿ ಬ್ಯುಸಿ ಇರುವ ರಶ್ಮಿಕಾ ಬದಲಿಗೆ ತೆಲುಗು ಮಂದಿಯಲ್ಲಿ ಕ್ರೇಜ್ ಕ್ರಿಯೇಟ್ ಮಾಡಿರುವ ಶ್ರೀಲೀಲಾರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *