in ,

ಕರ್ನಾಟಕ ಆಯ್ತು ಈಗ ತಮಿಳುನಾಡಲ್ಲೂ ಅಮೂಲ್ ಗೆ ವಿರೋಧ..!.

suddione whatsapp group join

 

 

ಇತ್ತಿಚೆಗಷ್ಟೇ ಕರ್ನಾಟಕದಲ್ಲಿ ನಂದಿನಿಯನ್ನು ಅಮೂಲ್ ಜೊತೆ ವಿಲೀನ ಮಾಡುವುದಕ್ಕೆ ದೊಡ್ಡ ಪ್ಲ್ಯಾನ್ ನಡೆದಿತ್ತು. ಆದರೆ ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಅದನ್ನು ನಿಲ್ಲಿಸಲಾಗಿತ್ತು. ಅದಾದ ಬಳಿಕ ಹೊಸ ಸರ್ಕಾರ ಬಂದ ಮೇಲೆ ಆ ವಿಚಾರ ತಣ್ಣಗಾಗಿದೆ. ಆದ್ರೆ ಇದೀಗ ಅದೇ ಅಮೂಲ್ ವಿಚಾರ ಈಗ ತಮಿಳುನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದೇ ವಿಚಾರ ತಮಿಳುನಾಡಿನಲ್ಲಿ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇಂದ್ರ ಗೃಹ ಸಚಿವ ಅಮಿತ್ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸಹಕಾರಿ ಆವಿನ್ ಹಾಲಿನ ಶೆಡ್ ನಿಂದ ಅಮುಲ್ ಹಾಲು ಸಂಗ್ರಹಿಸುವಂತೆ ತಡೆಯಲು ಮನವಿ ಮಾಡಿದ್ದಾರೆ. ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವೂ ಕೃಷ್ಣಗಿರಿಯಲ್ಲಿ ಶಿತಲೀಕರಣ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ತಮ್ಮ ಬಹುರಾಜ್ಯ ಪರವಾನಗಿಯನ್ನು ಬಳಸಿಕೊಂಡಿರುವುದು ಗಮನಕ್ಕೆ ಬಂದಿದೆ.

ನಮ್ಮ ರಾಜ್ಯಗಳ ಸ್ವಸಹಾಯ ಗುಂಪುಗಳ ಸಹಾಯದಿಂದ ಸುತ್ತಾಮುತ್ತ ಹಾಲು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಪರಸ್ಪರರ ಹಾಲಿನ ಶೆಡ್ ಗಳ ಪ್ರದೇಶವನ್ನು ಉಲ್ಲಂಘಿಸದೆ ಸಹಕಾರಿ ಸಂಸ್ಥೆಗಳು ಅಭಿವೃದ್ದಿ ಹೊಂದಲು ಅವಕಾಶ ನೀಡುವುದು ಭರತದಲ್ಲಿ ರೂಢಿಯಾಗಿದೆ. ಇಂತಹ ಅಡ್ಡ ವ್ಯವಹಾರವೂ ಆಪರೇಷನ್ ವೈಟ್ ಫ್ಲಡ್ ಆಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ, ಬೆಳೆ ಹಾಗೂ ಮನೆಗಳಿಗೆ ಹಾನಿಯಾದ ಮಾಹಿತಿ ಇಲ್ಲಿದೆ….!

ಕರ್ನಾಟಕ ಆಯ್ತು ಈಗ ತಮಿಳುನಾಡಲ್ಲೂ ಅಮೂಲ್ ಗೆ ವಿರೋಧ..!