ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ವಿವಾದಗಳು, ವಾರ್ ಗಳು ಕೆಲವೊಮನದು ವಿಚಾರದ ಮೇಲೆ ನಡೆಯುತ್ತಲೆ ಇದೆ. ಮುಸ್ಲಿಂ ಸಮುದಾಯದವರ ಬಳಿ ಏನನ್ನು ಖರೀದಿಸಬಾರದು ಎಂಬ ವಿಚಾರದ ಮೇಲೆ ಕೆಲವೊಂದನ್ನು ಬ್ಯಾನ್ ಮಾಡುವ ಅಭಿಯಾನ ಶುರುವಾಗಿದೆ. ಅದರಲ್ಲಿ ಹಲಾಲ್ ಕಟ್ ಕೂಡ ಒಂದು. ಇದೀಗ ಚಿನ್ನವನ್ನು ಮುಸ್ಲಿಂರ ಬಳಿ ಖರೀದಿಸಬೇಡಿ ಎಂಬ ಅಭಿಯಾನ ಶುರುವಾಗಿದೆ.

ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಇಂಥದ್ದೊಂದು ಅಭಿಯಾನ ತಲೆಯೆತ್ತಿದೆ. ಯುಗಾದಿ ಹಬ್ಬದ ದಿನ ಹೇಗೆ ಜಟ್ಕಾ ಕಟ್ ಅಭಿಯಾನ ಶುರುವಾಯಿತೋ ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಈಗ ಚಿನ್ನದ ಅಭಿಯಾನ ಶುರುವಾಗಿದೆ. ಅಕ್ಷಯ ತೃತೀಯ ಹಬ್ಬದ ದಿನ ಹಿಂದೂಗಳ ಅಂಗಡಿಯಲ್ಲೆ ಚಿನ್ನ ಖರೀದಿಸಿ ಎಂಬ ಅಭಿಯಾನ ಶುರುವಾಗಿದೆ.

ಅನ್ಯ ಧರ್ಮೀಯರ ಅಂಗಡಿಗಳಲ್ಲಿ ಚಿನ್ನ ಖರೀದಿಸಲೇ ಬೇಡಿ. ಯಾವ ಧರ್ಮದವರ ಅಂಗಡಿ ಎಂದು ನೋಡಿಕೊಂಡು ಚಿನ್ನ ಖರೀದಿಸಿ. ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಚಿನ್ನ ಖರೀದಿಸಬೇಡಿ ಎಂದು ಹಿಂದೂಪರ ಸಂಘಟನೆಗಳು ಟ್ವಿಟ್ಟರ್ ಅಭಿಯಾನ ಶುರು ಮಾಡಿವೆ.

