ದೀಪಾವಳಿ ಬಳಿಕ ಅಡಿಕೆಯಲ್ಲಿ ಬಂಪರ್ ಏರಿಕೆ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಈಗ ಬೆಲೆ ಎಷ್ಟಿದೆ..?

suddionenews
1 Min Read

ಶಿವಮೊಗ್ಗ: ಕಳೆದ ಕೆಲವು ತಿಂಗಳ ಹಿಂದೆ ಅಡಿಕೆಯಲ್ಲಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಇದೀಗ ದೀಪಾವಳಿ ಬಳಿಕ ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆಯೇ ಕಂಡಿದೆ. ಇದು ಅಡಿಕೆ ಬೆಳೆಗಾರರಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟ ವಿಚಾರವಾಗಿದೆ. ಸದ್ಯಕ್ಕೆ ಮಲೆನಾಡಿನ ಭಾಗದಲ್ಲಿ ರೈತರು ಅಡಿಕೆ ಕೊಯ್ಲು ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಅಡಿಕೆ ಫಸಲು ಕಡಿಮೆಯಾಗಿದೆ ಎಂದು ಬೇಸರ ಮಾಡಿಕೊಳ್ಳುತ್ತಿರುವಾಗಲೇ ಬೆಲೆ ಏರಿಕೆಯಿಂದ ಕೊಂಚ ನೆಮ್ಮದಿ ಸಿಕ್ಕಂತೆ ಆಗಿದೆ.

ಮಲೆನಾಡು ಭಾಗದಲ್ಲಿ ಶಿವಮೊಗ್ಗ, ಅಡಿಕೆಯ ಪ್ರಮುಖ ಮಾರುಕಟ್ಟೆಯಾಗಿದೆ. ವಿವಿಧ ಮಾದರಿಯ ಅಡಿಕೆಗಳು ಸಹ ಮಾರುಕಟ್ಟೆಗೆ ಬರುತ್ತಿವೆ. ಹೊಸ ಅಡಿಕೆಗಳು ಬಂದಾಕ್ಷಣಾ ಬೆಲೆ ಏರಿಕೆಯಾಗಿದ್ದು ಸಹಜವಾಗಿಯೇ ರೈತರಿಗೆ ಸಂತಸ ತಂದಿದೆ. ಸದ್ಯ ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂಬುದನ್ನು ನೋಡುವುದಾದರೆ..?

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆ ನೋಡುವುದಾದರೆ, ಗೊರಬಲು ಅಡಿಜೆಗೆ 17,500-32,089 ಇದೆ. ನ್ಯೂ ವೆರೈಟಿ ಅಡಿಕೆ 39,069-49,299 ಇದೆ. ಬೆಟ್ಟೆ ಅಡಿಕೆ 43,152-57,310 ಇದೆ. ರಾಶಿ ಅಡಿಕೆ 33,899-49,559 ಇದೆ. ಸರಕು ಅಡಿಕೆ 47,000-83,163 ಇದೆ.

ಸಾಗರ ಮಾರುಕಟ್ಟೆಯಲ್ಲಿ ನೋಡುವುದಾದರೆ, ಕೆಂಪುಗೋಟು 26,280-29,089 ಇದೆ. ಕೋಕ 18,114-24,584 ರೂಪಾಯಿ ಇದೆ. ಚಾಲಿ 26,214-32,299 ಇದೆ. ಬಿಳಿ ಗೋಟು 17,421-24,199 ಇದೆ. ಬಿಳಿಗೋಟು ಅಡಿಕೆ 17,421 – 24,199 ಇದೆ. ಇನ್ನು ರಾಶಿ 43,019 – 48,359 ಮಾರಾಟವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *