ನರೇಂದ್ರ ಮೋದಿ, ಲಲಿತ್ ಮೋದಿ, ನೀರವ್ ಮೋದಿ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿಗೆ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ನೀಡಿದೆ. ಇದರಿಂದಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸಂಸದ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ನೀಡಿರುವ ವಸತಿಯನ್ನು ಒಂದು ತಿಂಗಳ ಒಳಗೆ ಖಾಲಿ ಮಾಡುವಂತೆ ಲೋಕಸಭಾ ವಸತಿ ಸಮಿತಿ ನೋಟೀಸ್ ನೀಡಿದೆ.
ಏಪ್ರಿಲ್ 22ರ ಒಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ನಿಯಮಗಳ ಪ್ರಕಾರ ಸರ್ಕಾರಿ ಬಂಗಲೆಯಲ್ಲಿ ಇರುವಂತೆ ಇಲ್ಲ ಎಂದು ನೋಟೀಸ್ ನಲ್ಲಿಯೇ ತಿಳಿಸಲಾಗಿದೆ. ರಾಹುಲ್ ಗಾಂಧಿ ಅವರು ಅಮೇಥಿಯಿಂದ 2004ರಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ಬಳಿಕ ನಾಲ್ಕು ಬಾರಿ ಸತತವಾಗಿ ಗೆಲುವು ಕಂಡಿದ್ದರು. ಹೀಗಾಗಿ ಸರ್ಕಾರಿ ಬಂಗಲೆ ನೀಡಲಾಗಿತ್ತು.
ಈ ಸಂಬಂಧ ರಾಹುಲ್ ಗಾಂಧಿ ಮಾತನಾಡಿದ್ದು, ನನಗೆ ಈವರೆಗೂ ಆ ರೀತಿಯ ನೋಟೀಸ್ ನಂಗೆ ಸಿಕ್ಕಿಲ್ಲ ಎಂದಿದ್ದಾರೆ. ದಿಲ್ಲಿಯಲ್ಲಿರುವ ಲೂಧಿಯಾದಲ್ಲಿ ಬಂಗಲೆ ನೀಡಲಾಗಿದೆ. ಏಪ್ರಿಲ್ 22ರ ತನಕ ಸಮಯ ನೀಡಲಾಗಿದ್ದು, ನಂತರ ಖಾಲಿ ಮಾಡಲು ನೋಟೀಸ್ ನೀಡಲಾಗಿದೆ.