ದರ್ಶನ್ ಭೇಟಿ ಬೆನ್ನಲ್ಲೇ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ : ಒಂದು ಲಕ್ಷ ರೂಪಾಯಿ ಸಹಾಯ..!

2 Min Read

 

 

ಸುದ್ದಿಒನ್, ಚಿತ್ರದುರ್ಗ, ಜುಲೈ. 26  : ಅಶ್ಲೀಲ ಮೆಸೇಜ್ ಮಾಡಿದ್ದ ರೇಣುಕಾ ಸ್ವಾಮಿ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಪ್ರಾಣವನ್ನೇ ಕಳೆದುಕೊಂಡು ಬಿಟ್ಟ. ಈಗ ತಂದೆ-ತಾಯಿ-ಹೆಂಡತಿ ದಿಕ್ಕೆ ಕಾಣದೆ ಕಂಗಲಾಗಿದ್ದಾರೆ. ಅವರ ಮನೆಗೆ ಇಂದು ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ಜೊತೆಗೆ ಸಹಾಯವಾಗಲೆಂದು ಒಂದು ಲಕ್ಷ ರೂಪಾಯಿ ಹಣದ ಚೆಕ್ ನೀಡಿದ್ದಾರೆ.

ನಗರದ ತುರುವನೂರು ರಸ್ತೆಯ ವಿಆರ್ ಎಸ್ ಬಡಾವಣೆಯ ರೇಣುಕಾ ಸ್ವಾಮಿ ಮನಗೆ ಭೇಟಿ ನೀಡಿ ಅವರ ತಂದೆ ತಾಯಿ ಮತ್ತು ಪತ್ನಿ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ವಿನೋದ್ ರಾಜ್, ಮೃತ ರೇಣುಕಾಸ್ವಾಮಿ ಅವರು ಮನೆಗೆ ಆಧಾರವಾಗಿದ್ದರು. ಆದರೆ ಇಂದು ಅವರೇ ಕುಟುಂಬದಲ್ಲಿ ಇಲ್ಲ. ವಯಸ್ಸಾದ ಅವರ ತಂದೆ ತಾಯಿ ಇದಾರೆ. ಈಗ ಅವರನ್ನು ನೋಡಿಕೊಳ್ಳೋರು ಯಾರೂ ಇಲ್ಲದಂತಾಗಿದೆ. ಜೀವನ ಇಡೀ ಸಂಪಾದನೆ ಹೆಸರು ಮಾಡೋದು ಅಲ್ಲ, ಜೀವನವಿಡೀ ನಾವು ಒಳ್ಳೆಯದನ್ನೇ ಮಾಡಬೇಕು. ತಂದೆ ತಾಯಿಯ ರೂಪದಲ್ಲಿ ದೇವರು ಮನುಷ್ಯ ಜೀವಿಯನ್ನು ಸೃಷ್ಟಿ ಮಾಡುತ್ತಾನೆ. ಕಲಾವಿದರಾದ ನಾವು ಸರಿಯಾಗಿ ನಡೆದುಕೊಳ್ಳಬೇಕು ನಾವು ತಪ್ಪು ಮಾಡಿದ್ರೂ ಅದು ಸರಿ ನಾ ಅನ್ನೋ ಭಾವನೆ ಜನರಿಗೆ ಬರುತ್ತೆ ಎಂದರು.

ಕಲಾವಿದರಾದ ನಾವು ಮಾತನಾಡಿದ್ರೆ ಅದು ದೊಡ್ಡದಾಗಿ ಕಾಣುತ್ತೆ ಕಲಾವಿದರಾದ ನಾವು ಜನಸಮಾನ್ಯರಂತೆಯೇ ಇರ್ತೀವಿ. ಆದ್ರೆ ನಮಗೆ ಗೌರವದ ಜೊತೆ ಜವಾಬ್ದಾರಿ ಕೊಟ್ಟು ಬಿಟ್ಟಿರ್ತಾರೆ. ನಾವು ಸಮಾಜದಲ್ಲಿ‌ ಬಹಳ ಎಚ್ಚರಿಕೆಯಿಂದ ಬಾಳಬೇಕು.  ಮಾಧ್ಯಮದವರು ಮಿತ್ರರೇ ಹೊರತು ಶತ್ರುಗಳಲ್ಲ, ಅವ್ರು ಕೆಲವೇಳೆ ನಮಗೆ ತಿದ್ದಿ ಬುದ್ದಿ ಹೇಳ್ತಾರೆ. ನಾವು ಅವರೊಂದಿದೆ ತುಂಬಾ ಒಳ್ಳೆಯ ರೀತಿ ನಡೆದುಕೊಳ್ಳಬೇಕು. ಇಲ್ಲದಿದ್ರೆ ಇಂಥ ಅಚಾತುರ್ಯ ನಡೆಯುತ್ತೆ ಎಂದರು.

ಇತ್ತಿಚೆಗೆ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ‌ಮಾಡಿ ಬಂದಿದ್ದರು. ಈ ಬಗ್ಗೆ ಮಾತನಾಡಿ, ಜೈಲಲ್ಲಿ ನನ್ನ ಜೊತೆ 5 ಜನ ದರ್ಶನ್ ಅವರನ್ನು ಭೇಟಿ ಮಾಡಿದ್ರು. ಈ ವೇಳೆ ನಮ್ಮನ್ನು ನೋಡಿ ದರ್ಶನ್ ಭಾವುಕರಾದ್ರು. ಅವ್ರು ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲಿ ಅಂತಿದಾರೆ. ಅವರು ಹೇಳಿದ್ದನ್ನು ಬಿಟ್ಟು ನಾನು ಬೇರೇನು ಹೇಳಲು ಸಾಧ್ಯ ಎಂದರು.

ಇನ್ನು ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಮನೆ ಭೇಟಿ ಕುರಿತು ಮಾತನಾಡಿದ ಅವರು, ದರ್ಶನ್ ಭೇಟಿಗೆ ಮೊದಲೇ ರೇಣುಕಾ ಸ್ವಾಮಿ ಅವರ ಮನೆಗೆ ಬರಬೇಕಿತ್ತು. ಆದ್ರೆ ನನಗೆ 7 ನೇ ತಾರೀಕು ಮೇಜರ್ ಸರ್ಜರಿ ಆಯ್ತು. ಈಗ ನಾನು ಸುಧಾರಿಸಿಕೊಂಡ ಬಳಿಕ ಭೇಟಿ ಮಾಡಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *