ಬೆಂಗಳೂರು: ಚುನಾವಣಾ ಫಲಿತಾಂಶ ಬಂದ ದಿನದಿಂದ ಸಿಎಂ ಹುದ್ದೆಗೆ ಆಯ್ಕೆ ಮಾಡುವುದೇ ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಿನ ಕೆಲಸವಾಗಿತ್ತು. ಅಂತು ಫೈನಲಿ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಫೈನಲ್ ಆಗಿದೆ. ಈಗ ಸಂಪುಟದಲ್ಲಿ ಯಾರೆಲ್ಲಾ ಇರ್ತಾರೆ..? ಎಂಬುದೇ ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ.
ಹೊಸ ಸರ್ಕಾರದಲ್ಲಿ 28 ಹೊಸ ಸಚಿವರ ಆಯ್ಕೆಗಾಗಿ ನೂತನ ನಿಯೋಜಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಸಿದ್ದರಾಮಯ್ಯ ಆಪ್ತರಲ್ಲಿ ಹತ್ತು ಮತ್ತು ಡಿಕೆಶಿ ಆಪ್ತರಲ್ಲಿ ಹತ್ತು ಜನ ಸಚಿವರಾಗುತ್ತಾರೆ ಎನ್ನಲಾಗಿತ್ತು. ಇದೀಗ ದೆಹಲಿಯಲ್ಲಿ ತೀರ್ಮಾನವಾಗಲಿದೆ.
ಅದರ ಜೊತೆಗೆ ಒಂದಷ್ಟು ಹೊಸ ಐಡಿಯಾಗಳನ್ನು ಬಳಕೆ ಮಾಡಲಾಗುತ್ತಿದೆ. ಜಿಲ್ಲಾವಾರು ಸಚಿವರ ಆಯ್ಕೆ ಮಾಡಲು ತೀರ್ಮಾನ ಮಾಡಿಕೊಳ್ಳಲಾಗಿದೆ. ಇನ್ನು ಹೊಸ ಮುಖಗಳಿಗೂ ಮಣೆ ಹಾಕುತ್ತಾರೆ ಎನ್ನಲಾಗಿದೆ. ದೆಹಲಿಯಿಂದ ಬಂದ ಬಳಿಕ ಸಂಪುಟದಲ್ಲಿ ಯಾರೆಲ್ಲಾ ಇರ್ತಾರೆ ಎಂಬುದನ್ನು ನಿಯೋಜಿತ ಸಿಎಂ ಅನೌನ್ಸ್ ಮಾಡಲಿದ್ದಾರೆ. ನಾಳೆ ಅಂದ್ರೆ ಮೇ 20ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.