ಬೆಂಗಳೂರು: ಹಳೆ ಮೈಸೂರು ಭಾಗವನ್ನು ಜೆಡಿಎಸ್ ತೆಕ್ಕೆಯಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಅದಕ್ಕೆ ಎನರ್ಜಿ ನೀಡುವಂತೆ ಒಬ್ಬೊಬ್ಬರೇ ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ವಿಜಯ ಸಾಧಿಸಿದ್ದ ಸುಮಲತಾ ಇತ್ತಿಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಶಿವರಾಮೇಗೌಡರ ಸರದಿ.
ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಎಲ್ ಆರ್ ಶಿವರಾಮೇಗೌಡ ಅವರು ತಟಸ್ಥರಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಾ ಇತ್ತು. ಆದ್ರೆ ಈಗ ಅವರು ಬಿಜೆಪಿ ಸೇರುವ ಸುಳಿವು ಸಿಗುತ್ತಿದೆ. ನಾಳೆ ಇದಕ್ಕೊಂದು ಅಧಿಕೃತ ಕ್ಲಾರಿಟಿ ಸಿಗಲಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಬಿಜೆಯ ಬೃಹತ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಸುಧಾಕರ್ ಅವರಿಗೆ ಶಿವರಾಮೇಗೌಡ ಸ್ವಾಗತ ಕೋರಿ ತಮ್ಮ ಸೋಷೊಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನು ನೋಡುತ್ತಿದ್ದರೆ ಬಿಜೆಪಿ ಸೇರುವುದು ಪಕ್ಕಾ ಎನ್ನುವುದು ಕನ್ಫರ್ಮ್ ಆಗುತ್ತಿದೆ. ಆದ್ರೆ ನಾಳೆ ಅಧಿಕೃತ ವಿಚಾರ ಹೊರ ಬರಲಿದೆ.