ಶಿವಣ್ಣ ಅವರ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಸಂಕ್ರಾಂತಿಯ ಸಿಹಿ ಹೆಚ್ಚಾದಂತೆ ಆಗಿದೆ. ಯಾಕಂದ್ರೆ ಶಿವಣ್ಣ ಅಮೆರಿಕಾದಲ್ಲಿಯೇ ಇದ್ದಾರೆ. ಸರ್ಜರಿ ಆದ ಒಂದು ತಿಂಗಳು ಅಲ್ಲಿಯೇ ಇರಲಿದ್ದಾರೆ. ಸಂಪೂರ್ಣ ವಿಶ್ರಾಂತಿ ಬೇಕಾಗಿದೆ. ಆದರೆ ಈಗ ಹೇಗಿದ್ದಾರೆ ಎಂಬುದಕ್ಕೆ ಗೀತಕ್ಕ ತೆಗೆದ ಫೋಟೋಗಳೇ ಉತ್ತರ ಹೇಳುತ್ತಿವೆ.
ಶಿವಣ್ಣ ಸದ್ಯ ಆರೋಗ್ಯವಾಗಿದ್ದಾರೆ. ಹೆಂಡತಿಯ ಜೊತೆಗೆ ಅಮೆರಿಕಾದ ಕಿನಾರೆಯಲ್ಲಿ ಒಂದು ಓಡಾಟ ನಡೆಸಿದ್ದಾರೆ. ಮೈಂಡ್ ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ. ಶಿವಣ್ಣನೇ ಗೀತಕ್ಕನಿಗೆ ಪ್ರಪಂಚ. ಕಷ್ಟ, ಸುಖ, ದುಃಖ, ಸಿನಿಮಾ ಯಶಸ್ಸು ಎಲ್ಲವನ್ನು ಜೊತೆಗೆ ನಿಂತು ಕಾಪಾಡುತ್ತಾರೆ. ಈಗ ಚಿಕಿತ್ಸೆಗಾಗಿಯೂ ಅಷ್ಟೇ ಅಮೆರಿಕಾಗೆ ತೆರಳಿರುವ ಗೀತಕ್ಕ ಶಿವಣ್ಣರ ಕಾವಾಲಾಗಿ ನಿಂತಿದ್ದಾರೆ. ಯಶಸ್ವಿ ಸರ್ಜರಿಯೂ ಆಗಿದ್ದು, ದಿನೇ ದಿನೇ ಚೇತರಿಸಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಏನೋ ಆಗಿದ್ದಾರೆ. ಆದರೆ ಟ್ರೀಟ್ಮೆಂಟ್ ನಲ್ಲಿಯೇ ಇರುವ ಕಾತಣ ರಿಸ್ಕ್ ಬೇಡ ಎಂದು ಅಮೆರಿಕಾದಲ್ಲಿಯೇ ಉಳಿದುಕೊಂಡಿದ್ದಾರೆ. ಅವರು ವಾಸವಿರುವ ಪ್ಲಾಟ್ ಪಕ್ಕದಲ್ಲಿಯೇ ಇರುವ ಬೀಚ್ ಗೆ ಭೇಟಿ ನೀಡಿ, ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಣ್ಣ ಎಲ್ಲಾ ಕಡೆ ಓಡಾಡುವ, ಆ ಫೋಟೋಗಳನ್ನು ಗೀತಕ್ಕ ತೆಗೆದಿದ್ದಾರೆ. ಬಳಿಕ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್ ಅಂತು ದಿಲ್ ಖುಷ್ ಆಗಿದ್ದಾರೆ.
ಸಧ್ಯಕ್ಕೆ ಶಿವಣ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಬೆಂಗಳೂರಿನಿಂದ ಹೊರಡುವಾಗ ತುಂಬಾ ಆತಂಕದಲ್ಲಿಯೇ ಇದ್ದರು. ಸೆಲೆಬ್ರೆಟಿಗಳೆಲ್ಲಾ ಧೈರ್ಯ ತುಂಬಿ ಕಳುಹಿಸಿದ್ದರು. ಸರ್ಜರಿ ಯಶಸ್ವಿಯಾಗಿದ್ದು, ಒಂದು ತಿಂಗಳು ಸಂಪೂರ್ಣ ವಿಶ್ರಾಂತಿ ಮಾಡಬೇಕಿದೆ. ಬಳಿಕ ಮೊದಲಿನಂತೆಯೇ ಇರಬಹುದಾಗಿದೆ.