ಸುದ್ದಿಒನ್, ಚಿತ್ರದುರ್ಗ, (ಮೇ.29) : ನಗರದ ಸಂತೆ ಮೈದಾನದ ನಿವಾಸಿ ಹಾಗೂ 23 ನೇ ವಾರ್ಡ್ ನ ನಗರಸಭೆಯ ಸದಸ್ಯ ಮಹಮ್ಮದ್ ಅಹಮದ್ ಪಾಶಾ ಸರ್ದಾರ್ ಅವರ ಹಿರಿಯ ಪುತ್ರ ಅಫ್ತಾಬ್ ಪಾಶಾ (41) ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ 11:30 ರ ವೇಳೆಗೆ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಇಂದು ರಾತ್ರಿ 9 ರ ವೇಳೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಖಬರಸ್ಥಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂತಿಮ ದರ್ಶನ ಪಡೆಯಲು ನಗರಸಭೆಯ ಸದಸ್ಯರು, ಪಕ್ಷ ಭೇದ ಮರೆತು ರಾಜಕೀಯ ಪಕ್ಷಗಳ ಮುಖಂಡರುಗಳು, ಸಂಘ ಸಂಸ್ಥೆಗಳು, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಕಂಬನಿ ಮಿಡಿದಿದ್ದಾರೆ.