ತಂತ್ರಜ್ಞಾನ ಆಧಾರಿತ ಭೋದನಾ ಸಾಧನಗಳನ್ನು ಅಳವಡಿಸಿಕೊಳ್ಳಿ : ಎನ್.ಆರ್. ತಿಪ್ಪೇಸ್ವಾಮಿ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಶ್ರೀಧರ್, ತುರುವನೂರು
ಮೊ: 78997 89545

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ಸರ್ಕಾರ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳು ಶಾಲೆಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀಡುವ ತಂತ್ರಜ್ಞಾನ ಆಧಾರಿತ ಬೋಧನಾ ಸಾಧನೆಗಳನ್ನು ಶಿಕ್ಷಕರು ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು, ಮಕ್ಕಳ ಕಲಿಕೆಯ ಅಭಿವೃದ್ಧಿಯನ್ನು ಸಾಧಿಸಿ ಅವರ ಭವಿಷ್ಯ ಉಜ್ವಲವಾಗುವಂತೆ ಶಿಕ್ಷಕರು ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ತುರುವನೂರು ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತುರುವನೂರು ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಧುರೈ ಕೆನರಾ ಬ್ಯಾಂಕ್ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಭಾಗ್ಯರೇಖಾ ಅವರು ತಮ್ಮ ಹುಟ್ಟೂರಿನ ಶಾಲೆಗೆ ಇಂಟರ್ಯಾಕ್ಟಿವ್ ಲರ್ನಿಂಗ್, ಟೆಕ್ನಾಲಾಜಿ ಪ್ಯಾನಲ್, ಯುಪಿಎಸ್, ಸ್ಪೀಕರ್, ಸಿಸಿಟಿವಿ, ವೆಬ್ ಕ್ಯಾಮ್ ಗಳನ್ನು ಅಳವಡಿಸಲು ಕೆನರಾ ಬ್ಯಾಂಕ್ ವತಿಯಿಂದ ಮೂರು ಲಕ್ಷ ಅನುದಾನ ಒದಗಿಸಿ ಹೆಣ್ಣು ಮಕ್ಕಳ ಕೆಲಸಕ್ಕೆ ಪ್ರೊತ್ಸಾಹ ನೀಡಿರುವುದು ನಿಜಕ್ಕೂ ತುಂಬಾ ಸಂತೋಷದ ವಿಷಯ.

ಹಾಗೆಯೇ ಸಾಂಪ್ರಾದಾಯಿಕ ಭೋದನೆಯ ಜತೆಯಲ್ಲಿ ದೃಶ್ಯಗಳ ಮೂಲಕ ಅಮೂರ್ತ ಪರಿಕಲ್ಪನೆಗಳನ್ನು ಈ ತಂತ್ರಜ್ಞಾನದ ಸಾಧನದಿಂದ ವಿದ್ಯಾರ್ಥಿನಿಯರಿಗೆ ಪರಿಣಾಮಕಾರಿಯಾಗಿ ಅರ್ಥೈಸಬಹುದು ಎಂದು ಅಭಿಪ್ರಾಯಪಟ್ಟರು. ಇಂಟರಾಕ್ಟಿವ್ ಪ್ಯಾನಲ್ ಒಳಗೊಂಡಿರುವ ಸುಮಾರು 120 ಜಿಬಿಯ ಸಾಮರ್ಥ್ಯ ಹೊಂದಿದ ಸ್ಮಾರ್ಟ್ ಟಿವಿ ಇದ್ದು, ಮೈಕ್ ನೊಂದಿಗೆ ,ವೆಬ್ ಕ್ಯಾಮ್ ವಿಡೀಯೋ ಒಳಗೊಂಡಿದೆ.ಇದರ ಮೂಲಕ ಮಕ್ಕಳಿಗೆ ಕನ್ನಡ,ಇಂಗ್ಲೀಷ್ ಎರಡೂ ಭಾಷೆಯಲ್ಲಿ ಸಾಂಪ್ರಾದಾಯಿಕ ಭೋದನೆ,ದೃಶ್ಯ ಸಂವಾದವನ್ನು ಈಗೀನ ಉನ್ನತ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ತಿಳಿಸಬಹುದು. ಅಂತರ್ಜಾಲದ ಅಮೂರ್ತ ಪರಿಕಲ್ಪನೆಗಳನ್ನು ಈ ತಂತ್ರಜ್ಞಾನದ ಸಾಧನದಿಂದ  ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥೈಸಬಹುದು ಎಂದು ತಿಳಿಸಿದರು.

ಉಪ ಪ್ರಧಾನ ವ್ಯವಸ್ಥಾಪಕರಾದ ಭಾಗ್ಯರೇಖಾ ಅವರು ಮಾತನಾಡಿ ಸುಮಾರು ಎರಡು ತಿಂಗಳಿನಿಂದ ಸ್ಮಾರ್ಟ್ ಬೋರ್ಡ್,ವೆಬ್ ಕ್ಯಾಮ್ ಒದಗಿಸುವ ಉದ್ದೇಶದಿಂದ ಶ್ರಮವಹಿಸಲಾಗಿದೆ. ಇದಕ್ಕೆಲ್ಲಾ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಹಾಗೂ ತುರುವನೂರು ಶಾಖಾ ವ್ಯವಸ್ಥಾಪಕರಾದ ಸುಶೀಲ್ ಕುಮಾರ್ ಅವರ ಸಹಕಾರ ಗಣನೀಯವಾಗಿದೆ ಎಂದರು.

ಸರ್ಕಾರಿ ಶಾಲೆಯ ಭೋಧಕರಾದ ಶಿಕ್ಷಕರು ನಮ್ಮಲ್ಲಿ ಅತ್ಯುತ್ತಮವಾದ ಜ್ಞಾನ,ಬುದ್ದಿವಂತಿಕೆವುಳ್ಳವರು.ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದವರು ರಾಜ್ಯ,ದೇಶಕ್ಕೆ ಕೀರ್ತಿ ತರುವಂತಹ ಮಟ್ಟಕ್ಕೆ ಸಾಧನೆಗೈದಿದ್ದಾರೆ.ನೀವೂ ಸಹ ಬದುಕಿನಲ್ಲಿ ಉತ್ತಮ ಸಾಧನೆ ಮಾಡಿ ಶಾಲೆ, ಪೋಷಕರು, ಊರಿಗೆ ಹೆಸರು ತನ್ನಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ತುರುವನೂರು ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ
ನಾವು ನಮ್ಮ ಕೈಲಾದ ಸಹಾಯ-ಸಹಕಾರ ನೀಡಿದ್ದೇವೆ.ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗ್ಯರೇಖಾ ಅವರ ಪತಿ ಶಿವಕುಮಾರ್ ಮಾತನಾಡಿದರು. ನಿವೃತ್ತ ಶಿಕ್ಷಕ ವಿವೇಕಾನಂದಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂಪತ್ ಕುಮಾರ್,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಅಜಯ್, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕಿರಣ್ಮಯ್ಯ, ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕಿ ನಾಗವೇಣಿ, ಹುಣುಸೇಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಟಿ.ಎಸ್. ರವಿ ಶಂಕರ್ ಈ ವೇಳೆ ಉಪಸ್ಥಿತರಿದ್ದರು. ಶಿಕ್ಷಕಿ ನಯನಾ ನಿರೂಪಿಸಿದರು. ಶಿಕ್ಷಕಿ ರೂಪ ಸ್ವಾಗತಿಸಿ,ವಂದಿಸಿದರು.ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಶಾಲು ಹೊದಿಸಿ,ಹಾರ ಹಾಕಿ ಸನ್ಮಾನಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *