ಸುದ್ದಿಒನ್, ಹಿರಿಯೂರು, ಮೇ. 15 : ನಗರದ ಹೊರವಲಯದ ಆಲೂರು ಕ್ರಾಸ್ ಬಳಿ ಇರುವ ಶ್ರೀ ಬಸವರಾಜ್ ಶಿಕ್ಷಣ ಸಂಸ್ಥೆಯಲ್ಲಿ 2025-2026ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್ ಗಳ ವ್ಯಾಸಂಗಕ್ಕೆ ಪ್ರವೇಶಾತಿ ಪ್ರಾರಂಭವಾಗಿದ್ದು, ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್ ಬಿ. ಸಚಿನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿ ಆಸಕ್ತಿ ಬಯಸಿರುವ ವಿದ್ಯಾರ್ಥಿಗಳು ಬಿಎಸ್ಸಿ ನರ್ಸಿಂಗ್, ಬಿಎಸ್ಸಿಎಂಎಲ್.ಟಿ, ಬಿಎಸ್ಸಿ ಎಟಿ ಅಂಡ್ ಓಟಿ, ಕೋರ್ಸ್ ಗೆ ಪ್ರವೇಶ ಪಡೆಯಬಹುದು. ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಜಿಎನ್.ಎಂ ಕೋರ್ಸ್ಗಳು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ಯಾರಾ ಮೆಡಿಕಲ್ ( ಡಿಎಂಎಲ್,ಟಿ, ಡಿಓಟಿ ಅಂಡ್ ಎಟಿ, ಡಿಹೆಚ್ ಐಗೆ ಕೋರ್ಸ್ ಗೆ ಮೂರು ವರ್ಷಗಳ ತರಭೇತಿ ಪ್ರವೇಶ ಆರಂಭವಾಗಿದೆ.
ಪ್ರವೇಶಾತಿ ಬಯಸುವ ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಕಛೇರಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರಾದ ಮುನಿಸ್ವಾಮಿ ಹಾಗೂ ಸಿ. ಸಂದೀಪ್ ಯಾದವ್, ಕಛೇರಿ ಮುಖ್ಯಸ್ಥೆ ಶ್ರೀಗೌರಿ ಸಂಪರ್ಕಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿಈ ಮೊಬಲ್ ನಂಬರ್ ಗೆ 9916242524, 7760249368 ಸಂಪರ್ಕಿಸಿ ಪ್ರವೇಶ ಪಡೆಯಬಹುದಾಗಿದೆ ಎಂದು ಕಾರ್ಯದರ್ಶಿ ಎಸ್.ಬಿ. ಸಚಿನ್ ಗೌಡ ತಿಳಿಸಿದ್ದಾರೆ.



