ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೂರು ವರ್ಷೆ ಮಗುವೊಂದು ಸಾವನ್ನಪ್ಪಿದ್ದು, ಶವ ಸಾಗಿಸುವುದಕ್ಕು ಆ್ಯಂಬುಲೆನ್ಸ್ ಇಲ್ಲದೆ, ಬೈಕ್ ನಲ್ಲಿಯೇ ತೆಗೆದುಕೊಂಡ ಹೋದ ದುರ್ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.
ಆದಿವಾಸಿ ಸಮುದಾಯದ ವೆಟ್ಟಿ ಮಲ್ಲಯ್ಯ ದಂಪತಿಯ ಪುತ್ರಿ ವೆಟ್ಟಿ ಸುಕ್ಕಿ ಮೃತ ಬಾಲಕಿ. ಸುಕ್ಕಿಗೆ ಇದ್ದಕ್ಕಿದ್ದ ಹಾಗೆ ಜ್ವರ ಕಾಣಿಸಿಕೊಂಡು ಪಿಡ್ಸ್ ಬಂದಿದೆ. ತಕ್ಷಣ ಸುಕ್ಕಿಯನ್ನು ಎನುಕೂರುನಲ್ಲಿನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ ಅಲ್ಲಿ ಜ್ವರ ಹೆಚ್ಚಾಗಿದ್ದು, ಸುಕ್ಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಜಿಲ್ಲಾಸ್ಪತ್ರೆಗೆ ಸೇರಿಸಲು ಹೇಳಿದ್ದಾರೆ. ತಕ್ಷಣ ಅಲ್ಲಿಂದ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ವೈದ್ಯರು ಚಿಕಿತ್ಸೆ ನೀಡುವಾಗಲೇ ಪುಟ್ಟ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಮಗುವಿನ ಶವ ಸಾಗಿಸಲು ಆಂಬುಲೆನ್ಸ್ ನೀಡಿ ಎಂದು ಆಸ್ಪತ್ರೆಯವರನ್ನು ಕೇಳಿದಾಗ ಹಣ ಕೇಳಿದ್ದಾರೆ. ಆಂಬುಲೆನ್ಸ್ ನೀಡುವಷ್ಟು ಹಣವಿಲ್ಲದೆ ಇದ್ದಾಗ ಮಗುವಿನ ಶವವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿದ್ದಾರೆ. ಸುಮಾರು 65 ಕಿಲೋ ಮೀಟರ್ ಮೇಡೆಪಲ್ಲಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳಿದಂತ ಹೃದಯ ವಿದ್ರಾವಕ ಘಟನೆ ನಡೆದಿದೆ.