ಚಿತ್ರದುರ್ಗ: ಪೊಲೀಸ್ ಕೆಲಸ ಎಂದರೆ ಸುಲಭದ ಮಾತಲ್ಲ. ಕಳ್ಳರನ್ನು, ದುಷ್ಟರನ್ನು, ದರೋಡೆಕೋರರನ್ನು ಹಿಡಿಯಲು ಒಮ್ಮೊಮ್ಮೆ ಬುದ್ದಿವಂತಿಕೆ ಉಪಯೋಗವಾದರೆ ಇನ್ನೊಂದೆಮ್ಮೊ ಫಿಸಕಲ್ ಎಫರ್ಟ್ ಹಾಕಬೇಕಾಗುತ್ತದೆ. ಹೀಗಾಗಿ ಪೊಲೀಸರಿಗೆ ಫಿಟ್ನೆಸ್ ತುಂಬಾನೇ ಮುಖ್ಯವಾಗುತ್ತದೆ. ಎಡಿಜಿಪಿ ಅಲೋಕ್ ಕುಮಾರ್ ಅವರು ಕೂಡ ಇಂದು ಎಲ್ಲರಿಗೂ ತೂಕ ಇಳಿಸಲು ಸಲಹೆ ನೀಡಿದ್ದಾರೆ.
ಇಂದು ಕಾನುನೂ ಸುವ್ಯವಸ್ಥೆಗಳ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ಸಭೆ ನಡೆದಿದೆ. ಈ ವೇಳೆ ಪೊಲೀಸರನ್ನು ನೋಡಿ ಆರೋಗ್ಯ ಟಿಪ್ಸ್ ಕೊಟ್ಟಿದ್ದಾರೆ. ಇದು ಟಫ್ ಜಾಬ್ ಆಗಿದೆ. ಫುಡ್ ಕಂಟ್ರೋಲ್ ಮಾಡಿ, ವ್ಯಾಯಾಮ ಮಾಡಿ ಎಂದು ಸಲಹೆ ನೀಡಿದ್ದಾರೆ.
ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್ಪಿ ಅನಿಲ್, ಚಳ್ಳಕೆರೆ ಡಿವೈಎಸ್ಪಿ ರಮೇಶ್, ಡಿಸಿಆರ್ಬಿ ಡಿವೈಎಸ್ಪಿ ಲೋಕೇಶ್, ಎಸ್ಪಿ ಕಚೇರಿ ಸಿಪಿಐ ನಾಗರಾಜ್ ಅವರಗೆ ಫಿಟ್ನೆಸ್ ಪಾಠ ಮಾಡಿದರು. ಹಿರಿಯೂರು ಸಿಪಿಐ ಆನಂದ್ ಅವರಿಗೆ ಸ್ಲಿಮ್ ಆಗಿದ್ದೀರಿ ಎಂದರು. ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ್ ಲೈಟ್ ವೇಯ್ಟ್ ಇದ್ದಾರೆ. ಉಳಿದವರು ಹೆವಿ ವೇಯ್ಟ್ ಆಗಿದ್ದೀರಿ. ತೂಕ ಇಳಿಸಿಕೊಳ್ಳಿ ಎಂದಿದ್ದಾರೆ.