ಚಿತ್ರದುರ್ಗ : ಜಿಲ್ಲಾ ಜಾನಪದ ಜಾಗೃತಿ ಪರಿಷತ್ವತಿಯಿಂದ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಹೆಚ್.ಜೆ.ಬಸವರಾಜ್ ಇವರು ಸಲ್ಲಿಸುತ್ತಿರುವ ಆರೋಗ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಆದರ್ಶರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾ ಜಾನಪದ ಜಾಗೃತಿ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ಸಾಧಕರುಗಳನ್ನು ಸನ್ಮಾನಿಸಲಾಯಿತು. ಕೆಲಸದ ಒತ್ತಡದ ನಡುವೆ ಡಾ. ಹೆಚ್.ಜೆ. ಬಸವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸದ ಕಾರಣ ಶನಿವಾರ ಜಿಲ್ಲಾಸ್ಪತ್ರೆಯಲ್ಲಿನ ಅವರ ಕೊಠಡಿಗೆ ತೆರಳಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಹೆಚ್. ಪ್ಯಾರೇಜಾನ್, ನ್ಯಾಯವಾದಿ ಓಂಕಾರ್ ಮೂರ್ತಿ, ಮಾದಿಗ ಮಹಾಸಭಾ ಸಂಚಾಲಕ ನಾಗರಾಜಪ್ಪ, ತಿಪ್ಪೇಸ್ವಾಮಿ, ಚಿದಾನಂದಪ್ಪ, ಎಸ್ ಸಂತೋಷ್, ಮಲ್ಲಿಕಾರ್ಜುನ್, ಎಸ್. ಶಿವಕುಮಾರ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.